23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್‌ಡಿಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಾಗಾರ

ಉಜಿರೆ: ಎಸ್‌ಡಿಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಾಗಾರ ಡಿ.30ರಂದು ನಡೆಯಿತು.

ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಮಂಜುಶ್ರೀ ಪ್ರಿಂಟರ್ಸ್ ನೌಕರರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಂಗಳೂರಿನ ಸಿಇಎನ್ (ಸೈಬರ್ ಎಕನಾಮಿಕ್ಸ್ ಆಂಡ್ ನಾರ್ಕೋಟಿಕ್ಸ್ ಕ್ರೈಮ್ಸ್) ಪೊಲೀಸ್ ಠಾಣಾ ಡಿ.ವೈ.ಎಸ್.ಪಿ. ಮಂಜುನಾಥ್ ಆರ್.ಜಿ. ಉದ್ಘಾಟಿಸಿ ಮಾತನಾಡಿ, ಸೈಬರ್ ಅಪರಾಧಗಳಿಗೆ ಯುವ ಜನಾಂಗ ಬಲಿಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.

ಸೈಬರ್ ತೊಂದರೆಗೆ ಒಳಗಾದಾಗ ಧೃತಿಗೆಡದೆ, ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡು ನಡೆದ ಅಪರಾಧದ ಕುರಿತ ಮಾಹಿತಿಯನ್ನು, ದಾಖಲೆಗಳನ್ನು ಜಿಲ್ಲಾ ಅಪರಾಧ ವಿಭಾಗಕ್ಕೆ ನೀಡಬೇಕು ಎಂದು ತಿಳಿಸಿದರು.

ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಡಿ. ಮಾತನಾಡಿ, ವಿವಿಧ ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ವಿವರವಾಗಿ ತಿಳಿಸಿದರು ಹಾಗೂ ಸೈಬರ್ ವಂಚನೆಗೆ ಒಳಗಾದಾಗ (೧೯೩೦ ಅಥವಾ ೧೧೨ ಗೆ ಕರೆ ಮಾಡಿದಾಗ ೫ ನಿಮಿಷದ ಒಳಗೆ ಹತ್ತಿರದ ಪೋಲೀಸರ ಬರುವು ಕುರಿತು ಹಾಗೂ ಅಲ್ಲಿಯವರೆಗೆ) ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ಮಂಜುಶ್ರೀ ಪ್ರಿಂಟರ್ಸ್‌ನ ವ್ಯವಸ್ಥಾಪಕ ಶೇಖರ್ ಟಿ. ಉಪಸ್ಥಿತರಿದ್ದರು.

ಸಹಾಯಕ ವ್ಯವಸ್ಥಾಪಕ ರವಿ ಪರಕ್ಕಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ವಿಶಾಲ್ ಹೆಗ್ಡೆ ಆಯ್ಕೆ

Suddi Udaya

ಫೆ.28: ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರತ್ನಾವತಿ ಪಿ ಸೇವಾ ನಿವೃತ್ತಿ

Suddi Udaya

ನೀರಿನ ಮಟ್ಟ ಹಾಗೂ ಭೂ ಕುಸಿತದ ಲಕ್ಷಣ ಕಂಡರೆ ಕೂಡಲೇ ಸಂಪರ್ಕಿಸುವಂತೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ಅರಸಿನಮಕ್ಕಿ ಶಿವಳ್ಳಿ ಸಮಾಜದ ಸಭೆ

Suddi Udaya

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುರಕ್ಷಾ ವಿಮಾ ಯೋಜನೆ ಚೆಕ್ ಹಸ್ತಾಂತರ

Suddi Udaya

ಮುಂಡಾಜೆ: ಮೂಲಾರು ದರ್ಖಾಸು ನಿವಾಸಿ ಕಮಲಾ ನಾಯ್ಕ ನಿಧನ

Suddi Udaya
error: Content is protected !!