ಸಾವ್ಯ: ಸಾವ್ಯ-ಗುಜ್ಜೊಟ್ಟು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್‌ನ 34ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜ್ಯೋತ್ಸವ ನಾಳೆ (ಜ.1 ರಂದು) ನಡೆಯಲಿದೆ.
ಬೆಳಿಗ್ಗೆ ಗಣಹೋಮ ಮತ್ತು ಅಶ್ವತ್ಥ ಪೂಜೆ., ಭಜನಾ ಕಾರ್ಯಕ್ರಮ ಆರಂಭ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಣಿಕಂಠ ಭಜನಾ ಮಂಡಳಿ, ಸಾವ್ಯ ತಂಡದ ಮಕ್ಕಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಉಪಹಾರ, ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸಸಿಹಿತ್ಲು ಇವರಿಂದ ನಾಗತಂಬಿಲ ಎಂಬ ಕಥಾ ಭಾಗವನ್ನು ಆಡಿತೋರಿಸಲಿದ್ದಾರೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.