ಧರ್ಮಸ್ಥಳ: ಬೆಂಗಳೂರಿನ ಪ್ರಸಿದ್ಧ ಹಾಗೂ ಅನುಭವಿ ಪ್ರವಾಸಿ ಆಯೋಜಕ ಮಾನ್ಯತೆ ಪಡೆದ ಅಡಿಗಾಸ್ ಯಾತ್ರಾದ ಪ್ರವಾಸ ದರ್ಶನದ ಮಾಹಿತಿ ಕೈಪಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಅನಾವರಣಗೊಳಿಸಿ ಶುಭ ಹಾರೈಸಿದರು.
ಅಡಿಗಾಸ್ ಯಾತ್ರಾದ ಸಂಸ್ಥಾಪಕ ಹಾಗೂ ಮಾಲಕರಾದ ಕೆ. ನಾಗರಾಜ ಅಡಿಗ , ಆಶಾ ಅಡಿಗ , ಆದಿತ್ಯ ಅಡಿಗ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ನಾಗೇಂದ್ರ, ಆದಿತ್ಯ ಭಟ್, ಮಹೇಶ್ ಹೆಚ್.ಜೆ, ಎಂ. ರಮೇಶ್, ಶಶಾಂಕ್ ಕುಮಾರ್ ಕೆ, ಪ್ರಸನ್ನ ಎಚ್ ಕೆ, ನರೇಶ್ ಕೆ. ಮತ್ತು ಉಜಿರೆಯ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.