ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನಿಂದ ಧನುರ್ಮಾಸದ 16ನೇ ದಿನವಾದ ಇಂದು(ಡಿ.31) ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕ್ಯಾಲೆಂಡರ್ ವರ್ಷದ ಅಂತಿಮ ದಿನದ ಪ್ರಯುಕ್ತ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ನಡೆಯಿತು.
ಈ ಸಂದರ್ಭದಲ್ಲಿ ದೀಪ ಪ್ರಜ್ವಲನೆಯನ್ನು ಶಾಸಕ ಹರೀಶ್ ಪೂಂಜ , ಅಳದಂಗಡಿ ವೈದ್ಯರಾದ ಡಾ| ಎನ್. ಎಂ. ತುಳುಪುಳೆ, ಹಾಗೂ ಧರ್ಮಸ್ಥಳದ ಭುಜಬಲಿಯವರು ನೆರವೇರಿಸಿಕೊಟ್ಟರು.
ಅರ್ಚಕರಾದ ವೇ| ಮೂ| ದಿನೇಶ್ ಭಟ್ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು. ಕು।ಸಿದ್ಧಿ ಚೇರ್ಕೂಡ್ಲು ಭಕ್ತಿ ಸ್ತುತಿಯನ್ನು ನಡೆಸಿಕೊಟ್ಟರು. ಹರೀಶ್ ಪೂಂಜ ಇಲ್ಲಿನ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ ಇಂತಹ ಕಾರ್ಯಗಳು ಎಲ್ಲಾ ಶ್ರದ್ಧಾಕೇಂದ್ರಗಳಿಗೂ ವಿಸ್ತರಿಸುವಂತಾಗಲಿ ಎಂದು ಹಾರೈಸಿದರು.
ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ದ ಹರೀಶ್ ಸಾಲ್ಯಾನ್ ಹಾಗೂ ಟ್ರಸ್ಟ್ ನ ಸದಸ್ಯರು ಹಾಗೂ ಭಗವದ್ಭಕ್ತರು ಭಾಗವಹಿಸಿದರು.
ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಬಂಧಕರಾದ ಎಸ್ ಎನ್ ಭಟ್, ನಾವೂರಿನ ವೈದ್ಯರಾದ ಡಾ। ಪ್ರದೀಪ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿಗಳಾದ ಧರ್ಣಪ್ಪ ಮೂಲ್ಯ ಧನ್ಯವಾದವನ್ನಿತ್ತರು.