25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ರಂಗಕಲೆಗಳ ಸ್ವರೂಪ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ರಂಗಕಲೆಗಳ ಸ್ವರೂಪ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಕ್ಷಕ ಕೇವಲ ಶಿಕ್ಷಣ ನೀಡುವ ಶಿಕ್ಷಕನಾಗಬಾರದು, ಬದಲು ಎಲ್ಲಾ ಲಘುತನಗಳನ್ನು ದಾಟಿ ಗುರುವಾಗಬೇಕು. ಮಕ್ಕಳ ಜೀವನದಲ್ಲಿನ ದಾರಿ ನೇರಗೊಳಿಸುವ ಗುರುವು ಆಗಬೇಕು. ಜಗತ್ತಿನ ಗುರುತನಗಳ ಸ್ವೀಕರಿಸುವ ಲಘುತನ ಎಲ್ಲಾ ಶಿಕ್ಷಕರಲ್ಲಿರಬೇಕು ಎಂದು ಓದು, ಬರಹ, ಹಾಡು, ಸುತ್ತಾಟ, ಕಲೆ ಹಾಗೂ ರಂಗಭೂಮಿ ಹೀಗೆ ನಾನಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿರುವ ರಂಗಕಲಾವಿದ ನಾದ ಎಂಬ ನಾಮಾಂಕಿತರಾದ ಭಾಸ್ಕರ್ ಮಣಿನಾಲ್ಕೂರು ಮಾತನಾಡುತ್ತಾ ಕಲಿಸುವ ಗುರು ಸಣ್ಣವನಾದರೆ, ಕಲಿಯುವ ಶಿಷ್ಯನು ಸಣ್ಣತನಕ್ಕೆ ಸೀಮಿತನಾಗುತ್ತಾನೆ. ಈ ಜಗತ್ತಿನಲ್ಲಿ ಕಲಿಕೆಯು ಮುಗಿಯುವಂತಹದಲ್ಲ. ಗುರುವಾದವನು ಸೋತ ಮಕ್ಕಳ ಜೊತೆ ನಿಲ್ಲಬೇಕು ಎಂದು ತಮ್ಮ ಸುಮಧುರ ಗಾಯನ ಹಾಗೂ ಎಕ್ತಾರಿಯ ಗಾಯನದ ಮೂಲಕ ತಿಳಿಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ಮಾತನಾಡಿ ಇತ್ತೀಚಿನ ಕಾಲದಲ್ಲಿ ಗುರುವನ್ನು ಕೇಳಿ ಕಲಿಯುವವರೇ ಹೆಚ್ಚು ಅದರ ಬದಲು ಗುರುವನ್ನು ನೋಡಿ ಕಲಿಯುವ ಹಂತಕ್ಕೆ ಗುರು ಬೆಳೆಯಬೇಕು. ಶಿಕ್ಷಕರು ಕೇವಲ ಆದರ್ಶಗಳನ್ನು ಕಲಿಸುವುದು ಮಾತ್ರವಲ್ಲದೆ ಅದನ್ನು ತಮ್ಮ ಜೀವನದಲ್ಲಿ ಅನುಸರಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ರಾಜಶೇಖರ್ ಹಳೆಮನೆ, ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನ ಉಪನ್ಯಾಸಕ ವೃಂದ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಬಿ.ಎಡ್. ಪ್ರಶಿಕ್ಷಣಾರ್ಥಿ ತೇಜಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದಿಂದ ಪಾದಯಾತ್ರೆ

Suddi Udaya

ನಾರಾವಿ ಮಾಂಡೋವಿ ಮೋಟಾರ್ಸ್ ನಿಂದ ಗುರುವಾಯನಕೆರೆಯಲ್ಲಿ ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್ ಆರಂಭ

Suddi Udaya

ಪಟ್ರಮೆ: ಅನಾರು ನಿವಾಸಿ ಭಾಸ್ಕರ ರಾವ್ ನಿಧನ

Suddi Udaya

ವೇಣೂರು ಪೊಲೀಸ್ ಠಾಣೆ ವತಿಯಿಂದ ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಅಕ್ರಮ ಸಾಗಾಣೆ ವಿರುದ್ಧದ ಜನಜಾಗೃತಿ ಅಭಿಯಾನ ಹಾಗೂ ಅರಿವು ಕಾರ್ಯಕ್ರಮ

Suddi Udaya

ಇಂದು (ಡಿ.2) ಗುರುವಾಯನಕೆರೆ ಎಕ್ಸೆಲ್ ಸಂಸ್ಥೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ: ಚೌಕಿ ಪೂಜೆ

Suddi Udaya

ಮಾಲಾಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya
error: Content is protected !!