April 21, 2025
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿಸಂಘ-ಸಂಸ್ಥೆಗಳು

ರೋಟರಿ ಕ್ಲಬ್ ಬೆಳ್ತಂಗಡಿ : ರಾಷ್ಟ್ರೀಯ ರೈತರ ದಿನ ಆಚರಣೆ

ಬೆಳ್ತಂಗಡಿ: ಪ್ರತಿಯೊಬ್ಬರ ಆರೋಗ್ಯದ ಗುಟ್ಟು ಅವರವರ ಕೈಯಲ್ಲೇ ಇದೆ. ಇಂದಿನ ತಲೆಮಾರಿಗೆ ಕೃಷಿ ದಾರಿಯನ್ನು ತೋರಿಸುವ ಸರಿಯಾದ ದಾರಿ ದೀಪ ಗಳಿಲ್ಲ. ನಮ್ಮ ಆರೋಗ್ಯ ಮತ್ತು ಲಾಭದಾಯಕ ಆದಾಯವನ್ನು ಗಳಿಸಲು ಕೃಷಿಯಿಂದ ಮಾತ್ರ ಸಾಧ್ಯ ಎಂದು ರಾಷ್ಟ್ರಪ್ರಶಸ್ತಿ ವಿಜೇತ, ಪ್ರಗತಿಪರ ಕೃಷಿಕ ಅನಿಲ್ ಬಳಂಜ ಅಭಿಪ್ರಾಯಪಟ್ಟರು.

ಅವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನದಲ್ಲಿ ನಡೆದ ರಾಷ್ಟ್ರೀಯ ರೈತರ ದಿನ ಆಚರಣೆಯಲ್ಲಿ ಮಾತನಾಡಿದರು.

ವಿದೇಶಿ ಹಣ್ಣುಗಳ ಗಿಡಗಳನ್ನು ಬೆಳೆಸಿ ಪೋಷಿಸುವುದು ನನ್ನ ಹವ್ಯಾಸ. 3 ತಿಂಗಳಿಗೊಮ್ಮೆ ವಿದೇಶ ಪ್ರಯಾಣ ಬೆಳೆಸುತ್ತೇನೆ. 1500ಕ್ಕೂ ಹೆಚ್ಚು ಬಗೆಯ ಅಂತಾರಾಷ್ಟ್ರೀಯ ಮಟ್ಟದ ಹೆಣ್ಣಿನ ಗಿಡಗಳು ನನ್ನ ಕೃಷಿ ಭೂಮಿಯಲ್ಲಿವೆ. ಅದರಲ್ಲಿ 800 ಕ್ಕೂ ಅಧಿಕ ಗಿಡಗಳು ಲಾಭದಾಯಕ ಫಲವನ್ನು ನೀಡುತ್ತಿವೆ. ಖಾಸಗಿ ಕಂಪೆನಿಗಳಷ್ಟೇ ಆದಾಯವನ್ನು ಕೃಷಿಯಲ್ಲಿ ಗಳಿಸಬವುದು. ಈ ಕೃಷಿಯಿಂದಾಗಿ ಜಗತ್ತಿನಾದ್ಯಂತ ಕೃಷಿ ಮಿತ್ರರು ಪರಿಚಿತರಾಗಿದ್ದಾರೆ.

ಜನರ ಪ್ರಕೃತಿ ಮೇಲಿನ ನಿಯಂತ್ರಿಸುವಿಕೆಯಿಂದ ಕೃಷಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ವೈವಿಧ್ಯತೆ ಇದ್ದಾಗ ಬೆಲೆ ಮತ್ತು ರೈತನ ಬಲ ಹೆಚ್ಚುತ್ತದೆ. ಕೃಷಿ ನಮಗಾಗಿ ಮಾತ್ರವಲ್ಲ ಅದು ಪಕೃತಿಗಾಗಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ, ನಿರಂತರವಾಗಿ ಕೃಷಿಯಲ್ಲಿ ತೊಡಗಿಕೊಂಡಿರುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿತ್ತದೆ. ಶಾರೀರಿಕ ಆರೋಗ್ಯವು ವೃದ್ಧಿಸುತ್ತದೆ. ಕೃಷಿಕರು ಸದಾ ಈ ನೆಲದ ಆರ್ಥಿಕ ವ್ಯವಸ್ಥೆಯ ಮತ್ತು ಆರೋಗ್ಯದ ಮಹ ಶಕ್ತಿಗಳು ಎಂದರು.

ಈ ಸಂದರ್ಭದಲ್ಲಿ ಹಣ್ಣುಗಳಲ್ಲಿನ ವೈಜ್ಞಾನಿಕ ಶಕ್ತಿ ಮತ್ತು ಔಷಧಿಯ ಗುಣಗಳನ್ನು ವಿವರಿಸಿ, ಸದಸ್ಯರುಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಹಲವು ದಶಕಗಳಿಂದ ಕೃಷಿ ಭೂಮಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಸಾಧನೆಗೈದು ರಾಷ್ಟ್ರ ಪ್ರಶಸ್ತಿ ಪಡೆದಿರುವ ಪ್ರಗತಿಪರ ಕೃಷಿಕ ಅನಿಲ್ ಬಳಂಜ ಅವರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ನಿವೃತ್ತ ಮೇ.ಜ.ರೊ. ಎಮ್.ವಿ.ಭಟ್, ರೊ. ಪ್ರಕಾಶ್ ಪ್ರಭು ಹಾಗು ರೊ.ಅನಂತಭಟ್ ಉಪಸ್ಥಿತರಿದ್ದರು.

ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ವಂದಿಸಿದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿವಾನಂದ ಪ್ರಭು ಅವರಿಗೆ ಶ್ರದ್ಧಾಂಜಲಿ

Suddi Udaya

ಪಟ್ರಮೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಉಜಿರೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಬಳಂಜ: ಇಂದು (ಮಾ.2) ಶ್ರೀ ಬೊಳ್ಳಜ್ಜ ದೈವದ ಮೂಲಸ್ಥಾನದಲ್ಲಿ ಸಾರ್ವಜನಿಕ ಅಗೇಲು ಸೇವೆ

Suddi Udaya

ಧರ್ಮಸ್ಥಳ: 22ನೇ ಯ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಗೆ ಆಹ್ವಾನ

Suddi Udaya
error: Content is protected !!