September 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಣಿಪಾಲ ಕೆಎಂಸಿಯಿಂದ ಬೆಂಗಳೂರಿನ ಜಯದೇವಆಸ್ಪತ್ರೆಗೆ ಮಗು ವೃಂದಳನ್ನು ತುರ್ತು ಚಿಕಿತ್ಸೆಗೆ ಕರೆದೊಯ್ದ ಈಶ್ವರ್ ಮಲ್ಪೆ ಆಂಬುಲೆನ್ಸ್- ಜಿರೋ ಟ್ರಾಫಿಕ್‌ಗೆ ಸಹಕರಿಸಿದ ಸಾರ್ವಜನಿಕರು, ವಾಹನ ಸವಾರರು ಹಾಗೂ ಪೊಲೀಸರು

ಬೆಳ್ತಂಗಡಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಜಿರೋ ಟ್ರಾಫಿಕ್ ಮೂಲಕ ೬ ತಿಂಗಳ ಮಗು ವೃಂದಳನ್ನು ಕರೆದೊಯ್ಯಲಾಯಿತು. ಖ್ಯಾತ ಮುಳುಗು ತಜ್ಞ, ಸಾಮಾಜ ಸೇವಕ ಈಶ್ವರ್ ಮಲ್ಪೆ ಅವರ ಆಂಬುಲೆನ್ಸ್ ಮೂಲಕ ಮಗುವನ್ನು ಉಚಿತವಾಗಿ ಚಿಕಿತ್ಸೆಗೆ ಕರೆದೊಯ್ಯಲಾಯಿತು.

ಮಣಿಪಾಲದಿಂದ ಹಿರಿಯಡ್ಕ, ಕಾರ್ಕಳ, ಬಜಗೋಳಿ, ಗುರುವಾಯನಕೆರೆ,ಬೆಳ್ತಂಗಡಿ, ಉಜಿರೆ, ಚಾರ್ಮಾಡಿ,. ಮೂಡಿಗೆರೆ, ಬೆಲೂರು, ಹಾಸನ, ಚನ್ನರಾಯಪಟ್ಣ, ಬೆಳ್ಳೂರು ಕ್ರಾಸ್, ನೆಲಮಂಗಲ ಮೂಲಕ ಜಯದೇವ ಆಸ್ಪತ್ರೆಗೆ ಕರೆಯದೊಯ್ಯಲಾಗುತ್ತಿದೆ.

ಮಣಿಪಾಲದಿಂದ ಹೊರಟ ಅಂಬುಲೆನ್ಸ್‌ಗೆ ಬೆಂಗಳೂರು ಮುಟ್ಟುವವರೆಗೆ ಯಾವುದೆ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಸಾರ್ವಜನಿಕರು, ವಾಹನ ಸಾವಾರರು ದಾರಿ ಮಾಡಿಕೊಟ್ಟರು, ಅಲ್ಲಲ್ಲಿ ಪೊಲೀಸರು ನಿಂತು ಜಿರೋ ಟ್ರಾಫಿಕ್‌ಗೆ ಸಹಕರಿಸಿದರು. ಅಂಬ್ಯುಲೆನ್ಸ್ ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ಅಳದಂಗಡಿ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ,

ಸೋಮಂತಡ್ಕ, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ ಮೂಲಕ ಮೂಡಿಗೆರೆಗೆ ತಲುಪುವರೆಗೆ ವಾಹನ ಸವರಾರು, ಸಾರ್ವಜನಿಕರು, ಪೊಲೀಸರು ಪೂರ್ಣ ಸಹಕಾರ ನೀಡಿದರು. ಮಣಿಪಾಲದಿಂದ ಬೆಂಗಳೂರಿಗೆ ಮಗುವಿನ ಚಿಕಿತ್ಸೆಗೆ ಕರೆದೊಯ್ಯುವ ಬಗ್ಗೆ ನಿನ್ನೆಯಿಂದಲೇ ವಾಟ್ಸಫ್‌ನಲ್ಲಿ ಮಾಹಿತಿ ಹಾಕಿ ಸಾರ್ವಜನಿಕರ ಹಾಗೂ ವಾಹನ ಚಾಲಕರ ಸಹಕಾರವನ್ನು ಕೋರಲಾಗಿತ್ತು.

Related posts

ಬೆಳ್ತಂಗಡಿಯ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ವತಿಯಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ

Suddi Udaya

ಬೆಳ್ತಂಗಡಿ: ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ ವತಿಯಿಂದ ಕೋರೆಗಾಂವ್ ವಿಜಯೋತ್ಸವ

Suddi Udaya

ಹುಣ್ಸೆಕಟ್ಟೆಯ ಪಂಜಿರ್ಪು ಬಳಿ ಚಿರತೆ ಓಡಾಟ: ಭಯಭೀತರಾದ ಜನರು

Suddi Udaya

ಮೇ 1: ಎಸ್.ಡಿ.ಎಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕನ್ಯಾಡಿ ಕಾರ್ಯಕ್ಷೇತ್ರದಲ್ಲಿ ದೀಪಶ್ರೀ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ

Suddi Udaya

ಧರ್ಮಸ್ಥಳದಲ್ಲಿ ನಡೆಯುವ ಸತ್ಯದರ್ಶನ ಕಾರ್ಯಕ್ರಮದ ಬಗ್ಗೆ ಕಣಿಯೂರುನಲ್ಲಿ ಪೂರ್ವಭಾವಿ ಸಭೆ

Suddi Udaya
error: Content is protected !!