ಕಳೆಂಜ: ಶ್ರೀ ಸದಾಶಿವ ದೇವಸ್ಥಾನದ ಶ್ರೀ ಶಾಸ್ತರ ದೇವರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯು ಜ.20ರಿಂದ 23ರ ವರೆಗೆ ಜರುಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ರವರು ಜ. 2ರಂದು ಬಿಡುಗಡೆಗೊಳಿಸಿ ಗರ್ಭಗುಡಿಯ ಕೆಲಸದ ಬಗ್ಗೆ ಹಾಗೂ ಅಭಿವೃದ್ಧಿ ಯ ಬಗ್ಗೆ ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಕಾಯಡ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಚಂದ್ರಶೇಖರ ಕೆ. ನಿಡ್ಲೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕೇಶವ ಗೌಡ ಮಲ್ಲಜಾಲ್, ಆಡಳಿತ ಸಮಿತಿ ಕೋಶಾಧಿಕಾರಿ ಕೇಶವ ಗೌಡ ಬರೆಮೇಲು ದರ್ಖಾಸು, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸದಸ್ಯ ಕೊರಗಪ್ಪ ಗೌಡ ನಿಡ್ಲೆ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಬರೆಮೇಲು, ಬಾಲಕೃಷ್ಣ ದೇವಾಡಿಗ ಬೇರ್ಬಳ್ಳಿ, ಆಡಳಿತ ಸಮಿತಿ ಸದಸ್ಯ ನೀಲಯ್ಯ ಗೌಡ, ರಾಮಚಂದ್ರ ಗೌಡ ಕೊಳಂಬೆ, ರಘುಚಂದ್ರ ಪೂಜಾರಿ ಚಾಕೋಟೆತ್ತಡಿ , ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ರುಕ್ಮಯ್ಯ ಗೌಡ ಬರೆಮೇಲು, ಆಡಳಿತ ಸಮಿತಿಯ ಸದಸ್ಯ ವಸಂತ ಪೂಜಾರಿ, ದೇವಪ್ಪ ಪೂಜಾರಿ ಶಾಲೆತ್ತಡ್ಕ, ರಮ್ಯಾ ಮಲ್ಲಜಾಲ್, ಶೋಭಾ ನಾಯೆರ್ ಮಾರ್,ವಿನೋದ ಕಲ್ಲದಂಬೆ, ದಿವ್ಯ ಬದಿಮಾರು, ಉಷಾ ಕಲ್ಲಗುಡ್ಡೆ, ಹಾಗೂ ಗೀತಾ ಕಜೆತ್ತಕೋಡಿ ಉಪಸ್ಥಿತರಿದ್ದರು.