37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಕಿಚನೋಮಿಕ್ಸ್ ಕಲರವ

ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜಿನಲ್ಲಿ ಅಡುಗೆ ತಿಳುವಳಿಕೆಯೊಂದಿಗೆ ನಿರೂಪಣಾ ಸಾಮರ್ಥ್ಯವೃದ್ಧಿಗಾಗಿ ಇರುವ ವಿಶೇಷ ಸ್ಪರ್ಧೆ- ಕಿಚನೋಮಿನಿಕ್ಸ್-2024ನ್ನು ಡಿ.31ರಂದು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿಯೇ ಇನ್‌ಸ್ಪೈರ್ ವಿದ್ವತ್ ವೇದಿಕೆಯಡಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ವೃತ್ತಿ ಕೌಶಲ್ಯ ಮತ್ತು ನಿರೂಪಣಾ ಸಾಮರ್ಥ್ಯ ವೃದ್ಧಿಗಾಗಿ ಪ್ರತಿವರ್ಷ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಲ್ಲಿ ಇದೂ ಒಂದು. ಮೊದಲನೆ ಬಾರಿಗೆ ಆಯೋಜಿಸಿರುವ ಹಾಗೂ ವಾಣಿಜ್ಯವಿಭಾಗದ ವಿದ್ಯಾರ್ಥಿಗಳಿಗಾಗಿಯೇ ಇರುವ ಈ ವಿಶೇಷ ಸ್ಪರ್ಧೆಯಲ್ಲಿ ನಾಲ್ಕು ತಂಡಗಳು ಭಾಗವಹಿಸಿ ಅವರ ಆಯ್ಕೆಯ ವಿಶೇಷ ರುಚಿ ತಯಾರಿಸಿ ಅದರಲ್ಲಿ ಉಪಯೋಗಿಸಿರುವ ಹಣ್ಣು, ತರಕಾರಿ, ಸಾಂಬಾರ ಪದಾರ್ಥಗಳ ಬಗೆಗಿನ ಸ್ಪಷ್ಟ ಮಾಹಿತಿ ನೀಡಿ, ಅವುಗಳ ಔಷಧ ಗುಣಗಳು, ಪ್ರೋಟೀನ್ ಹಾಗೂ ಇತರ ಗುಣಗಳ ಸವಿವರ ಮಾಹಿತಿ ನೀಡಿ ಆ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಾವ ರೀತಿ ಲಾಭ ಗಳಿಸಬಹುದೆಂಬುದರ ಬಗ್ಗೆ ತಮ್ಮಲ್ಲಿರುವ ನೈಪುಣ್ಯತೆಯನ್ನು ಪ್ರದರ್ಶಿಸಿದರು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ತಾವು ತಯಾರಿಸಬೇಕಾದ ರುಚಿಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಮಕ್ಕಳು ತಮಗೆ ಒದಗಿಸಲಾದ ಮೇಜಿನ ಮೇಲೇಯೇ ಇಟ್ಟು, ಅಲ್ಲಿಯೇ ಸಿದ್ದಪಡಿಸಿ ಸುಮಾರು ೪೦ಕ್ಕೂ ಹೆಚ್ಚಿನ ಖಾದ್ಯಗಳನ್ನು ಸಿದ್ಧಪಡಿಸಿದರು. ಸುಮಾರು ನಾಲ್ಕು ತಂಡಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ಗಮನ ಸೆಳೆವ ಪ್ರದರ್ಶನ ನೀಡಿದ ಬನ್ನಿ ತಿನ್ನಿ ರೆಸ್ಟೋರೆಂಟ್ ತಂಡ ಪ್ರಥಮ ಬಹುಮಾನ ಗಳಿಸಿತು.

ಉತ್ತಮ ಪೈಪೋಟಿ ನೀಡಿದ ಫ್ಲೇವರ್ ಪಾಲೆಟ್ ರೆಸ್ಟೋರೆಂಟ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸುಮಾರು 15 ದಿನಗಳ ಕಾಲ ತರಬೇತಿ ನೀಡಿ ಅಣಿಗೊಳಿಸಲಾಗಿದ್ದ ಈ ಸ್ಪರ್ಧೆಯ ನೇತೃತ್ವವನ್ನು ಆಂಗ್ಲ ಭಾಷಾ ಉಪನ್ಯಾಸಕರ ಆಶಿಕ್ ಬಾಲಚಂದ್ರ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ ಮಹಿತಾ ವಹಿಸಿದ್ದರು.

ಈ ಸ್ಪರ್ಧೆಯನ್ನು ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ ಮಂಡಗಳಲೆ ಉದ್ಘಾಟಿಸಿದರು.

ತೀರ್ಪುಗಾರರಾಗಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಅನಿಲ್ ಸುಸರಪು, ಸಸ್ಯಶಾಸ್ತ್ರದ ವಿಭಾಗದ ಉಪನ್ಯಾಸಕಿ ಶ್ರೀಮತಿ ಭಾಗ್ಯಲಕ್ಷ್ಮಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಕು. ಅನುಶ್ರೀ ಭಾಗವಹಿಸಿದ್ದರು.

ಪ್ರಾಂಶುಪಾಲಅರುಣ್ ಕ್ಯಾಸ್ಟಲಿನೊ ಉಪಸ್ಥಿತರಿದ್ದರು. ಉಪನ್ಯಾಸಕರಾದ ಆಶಿಕ್ ಬಾಲಚಂದ್ರ, ಶ್ರೀಮತಿ ಅನುಷ ಶೆಟ್ಟಿ. ಡಾ ಮಹಿತಾ ಕುಮಾರಿ, ನೀಲಕಂಠ ವಿವಿಧ ತಂಡಗಳ ಉಸ್ತುವಾರಿ ವಹಿಸಿದ್ದರು.

Related posts

ಧರ್ಮಸ್ಥಳದಲ್ಲಿ ನವಜೀವನ ಸದಸ್ಯರ ಶತದಿನೋತ್ಸವ: ಕಾರ್ಯಕ್ರಮದ ಅಂಗವಾಗಿ ವ್ಯಸನಮುಕ್ತ ಸಾಧಕರ ಸಮಾವೇಶ

Suddi Udaya

ರೂ. 6 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಮರು ಡಾಮರೀಕರಣ ಕಾಮಗಾರಿ: ಶಾಸಕ ಹರೀಶ್‌ ಪೂಂಜ ಉಪಸ್ಥಿತಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಶಿಲಾನ್ಯಾಸ

Suddi Udaya

ಮೋಹನ್ ಕುಮಾರ್ ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬೆಳಾಲು ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ ಕಾರ್ಯಕ್ರಮ

Suddi Udaya

ಅ.12: ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಆಚರಣೆಯ ಪ್ರಯಕ್ತ ಗ್ರಾಹಕರ ಸಮಾವೇಶ ಮತ್ತು ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ಎಸ್ ಡಿ ಎಮ್ ಶಾಲೆಯ ವಿದ್ಯಾರ್ಥಿಗಳು ಬುಲ್ ಬುಲ್ಸ್ ಗೀತಾ ಗಾಯನದಲ್ಲಿ ದ್ವಿತೀಯ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಾಳೆಕುದ್ರು ಮಠದ ಪೂಜ್ಯಶ್ರೀ ವಾಸುದೇವ ಸದಾಶಿವ ಆಶ್ರಮ ಮಹಾಸ್ವಾಮೀಜಿ ಭೇಟಿ

Suddi Udaya
error: Content is protected !!