ಪೆರಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪೆರಾಡಿ ಇದರ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀಮತಿ ಹೇಮಾರವರು ಜ.1ರಂದು ಅಧಿಕಾರ ಸ್ವೀಕರಿಸಿದರು.
ಕಳೆದ 39 ವರ್ಷಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತರಾದ ಯು.ಶೇಖ್ ಲತೀಪ್ ಅವರು ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾರವರಿಗೆ ಅಧಿಕಾರ ಹಸ್ತಾಂತರಿಸಿದರು.
ಶ್ರೀಮತಿ ಹೇಮರವರು ಕಳೆದ 22 ವರ್ಷಗಳಿಂದ ಗುಮಾಸ್ತೆಯಾಗಿ,ಲೆಕ್ಕಿಗರಾಗಿ,ಬ್ರಾಂಚ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಅಲಂಕರಿಸಿದ್ದಾರೆ.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯ ಸತೀಶ್ ಕಾಶಿಪಟ್ಣ,ಆಂತರೀಕ ಲೆಕ್ಕ ಪರಿಶೋಧಕ ಮಹೇಂದ್ರ ವರ್ಮ,ಲೆಕ್ಕಿಗ ರೋಹಿಣಿ,ಶಾಖ ವ್ಯವಸ್ಥಾಪಕ ವೀರೇಂದ್ರ ಕುಮಾರ್,ಸಿಬ್ಬಂದಿಗಳಾದ ಕವಿತಾ, ಪ್ರಜ್ಞಾ,ಅಕ್ಷತಾ,ನಳಿನಿ,ಸುಜಿತ್,ಮನೋಜ್ ಉಪಸ್ಥಿತರಿದ್ದರು.