17.4 C
ಪುತ್ತೂರು, ಬೆಳ್ತಂಗಡಿ
January 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ: ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆ

ಬಂದಾರು: ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಜ.೭ರಿಂದ ೧೨ ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆಯು ಜ.2ರಂದು ನಡೆಯಿತು.

ಪ್ರಗತಿಪರ ಕೃಷಿಕರಾದ ಧರ್ಣಪ್ಪ ಗೌಡ ಅಂಡಿಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸೀತಾರಾಮ ಶೆಟ್ಟಿ ಕೆಂಬರ್ಜೆ ಮಾರ್ಗದರ್ಶನ ನೀಡಿದರು. ಉದ್ಯಮಿ ರೈತಬಂಧು ಆಹಾರೋಧ್ಯಮ ಮಾಲಕರಾದ ಶಿವಶಂಕರ ನಾಯಕ್, ಬ್ರಹ್ಮಕಲಶೋತ್ಸವ ಪ್ರಧಾನ ಸಂಚಾಲಕ ಬಾಲಕೃಷ್ಣ ಪೂಜಾರಿ ಬಜಗುತ್ತು, ಅಧ್ಯಕ್ಷ ಮಹಾಬಲ ಗೌಡ ಸಲಹೆ ಸೂಚನೆ ಮಾಹಿತಿ ಅವಲೋಕನ ಮಾಡಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾದೆ, ಕೋಶಾಧಿಕಾರಿ ಕೇಶವ ಕೊಂಗುಜೆ, ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಗೌಡ, ಅರ್ಚಕರಾದ ಅನಂತರಾಮ ಶಬರಾಯ, ಅನುವಂಶೀಯ ಆಡಳಿಯ ಮೊಕ್ತೇಸರ ಕುಕ್ಕಪ್ಪ ಗೌಡ ಉಪಸ್ಥಿತರಿದ್ದರು.

ಜೀರ್ಣೋದ್ದಾರ ಸಮಿತಿ ಮಾಜಿ ಅಧ್ಯಕ್ಷ ಆದಪ್ಪ ಗೌಡ, ಆಡಳಿತ ಮಂಡಳಿ ಕಾರ್ಯದರ್ಶಿ ಉಮೇಶ್ ಗೌಡ, ಮಹಿಳಾ ಸಮಿತಿಯ ಜ್ಯೋತಿ ಕುರುಡಂಗೆ ಸಮಯೋಚಿತವಾಗಿ ಅನಿಸಿಕೆ ವ್ಯಕ್ತಪಡಿಸಿದರು.

ಆಡಳಿತ ಮಂಡಳಿಯ, ಬ್ರಹ್ಮಕಲಶೋತ್ಸವ ಸಮಿತಿಯ, ಎಲ್ಲಾ ಉಪಸಮಿತಿಯ ಸಂಚಾಲಕರು, ಸಹಸಂಚಾಲಕರು, ಸರ್ವ ಸದಸ್ಯರು, ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಜೊತೆ ಕಾರ್ಯದರ್ಶಿ ಸತೀಶ್ ಬಾಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Related posts

ಕೊಕ್ಕಡ: ‘ನಮ್ಮ ನಡೆ ಮತಗಟ್ಟೆ ಕಡೆ’ ಜಾಗೃತಿ ಅಭಿಯಾನ ಹಾಗೂ ಧ್ವಜಾರೋಹಣ ಕಾರ್ಯಕ್ರಮ

Suddi Udaya

ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ವಿಜೇತರಾದವರಿಗೆ ಅಭಿನಂದನೆ

Suddi Udaya

ಗೇರುಕಟ್ಟೆ :ಸಂವಿಧಾನ ಜಾಗೃತಿ ಜಾಥಾ

Suddi Udaya

ನಿವೃತ್ತ ಜಲಾನಯನ ಅಧಿಕಾರಿ ದಯಾನಂದ ಹೆಚ್. ಕುಕ್ಕೇಡಿ ನಿಧನ

Suddi Udaya

ಉಜಿರೆ: ಅರಣ್ಯ ಇಲಾಖೆ ಹಾಗೂ ಎಸ್.ವೈ.ಎಸ್ ಉಜಿರೆ ಯೂನಿಟ್ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಶ್ರೀವಿಶ್ವಕರ್ಮಾಭ್ಯುದಯ ಸಭಾದಿಂದ ಶ್ರೀವಿಶ್ವಕರ್ಮಯಜ್ಞ ಮತ್ತು ಪೂಜೆ

Suddi Udaya
error: Content is protected !!