ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ಜಿತೇಶ್- ಅನ್ವೇಷಾ ಜೈನ್ ಮಾಲೀಕತ್ವದ “ಹೆಗ್ಡೆ ಮೆಡಿಕಲ್” ಶುಭಾರಂಭ

ಉಜಿರೆ: ಪವರ್ ಹೌಸ್ ಬ್ಯಾಟರಿ ಮೂಲಕ ಕಳೆದ ಹಲವಾರು ವರ್ಷಗಳಿಂದ ಉದ್ಯಮ ಕ್ಷೇತ್ರದಲ್ಲಿ ಅನುಭವಿರುವ ಜಿತೇಶ್ ಜೈನ್ ಮತ್ತು ಅನ್ವೇಷಾ ಜೈನ್ ಮಾಲೀಕತ್ವದ ಹೆಗ್ಡೆ ಮೆಡಿಕಲ್ ಉಜಿರೆಯಲ್ಲಿ ಪ್ರಾರಂಭಗೊಂಡಿರುವುದು ಸಂತಸ ತಂದಿದೆ.ಇನ್ನಷ್ಟು ಉದ್ಯಮ ನಡೆಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯರವರು ಹೇಳಿದರು.

ಅವರು ಉಜಿರೆ ವಿಶ್ವಾಸ್ ಬಿಲ್ಡಿಂಗ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಹೆಗ್ಡೆ ಮೆಡಿಕಲ್ ಇದರ ಉದ್ಘಾಟನೆಯನ್ನು ಜು.11 ರಂದು ನೇರವೇರಿಸಿ ಮಾತನಾಡಿದರು.

ಇಲ್ಲಿಗೆ ಬರುವ ಗ್ರಾಹಕರಿಗೆ ಗುಣಮಟ್ಟದ ಸೇವೆ ದೊರಕಿ, ಸಮಾಜದಲ್ಲಿ ಎಲ್ಲರೂ ಲವಲವಿಕೆ, ಸಂತೋಷದಿಂದ ಜೀವನ ನಡೆಸುವಂತಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಚಂದ್ರಕಾಂತ್, ಉಜಿರೆ ಅಮೃತ್ ಟೆಕ್ಸ್ ಟೈಲ್ಸ್ ಮಾಲಕರಾದ ಪ್ರಶಾಂತ್ ಜೈನ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಜಿತ್ ಕುಮಾರ್ ಜೈನ್-ಮಂಜುಳಾ,ಅವನ್ ಸಿದ್ದಕಟ್ಟೆ,ಉಜಿರೆ ಬೆನಕ ಕನಸ್ಟ್ರಕ್ಷನ್ ನ ಗಣೇಶ್, ಉಜಿರೆ ಉದ್ಯಮಿಗಳಾದ ಮೋಹನ್ ಶೆಟ್ಟಿಗಾರ್, ರಾಮಚ್ಚಂದ್ರ ಶೆಟ್ಟಿ, ಹುಕುಂರಾಮ್ ಪಟೇಲ್, ಭರತ್ ಕುಮಾರ್ ಉಜಿರೆ,ಲಕ್ಷ್ಮಣ್ ಸಫಲ್ಯ, ನಿವೃತ್ತ ಪ್ರಾಂಶುಪಾಲರಾದ ಶರತ್ ಕುಮಾರ್,ಗುತ್ತಿಗೆದಾರ ಮಂಜುನಾಥ ಕಾಮತ್,ಪಿಡಿಓ ರಾಘವೇಂದ್ರ ಗೌಡ,ವಿಶ್ವನಾಥ ಶೆಟ್ಟಿ ಮಂಜುಶ್ರೀ,ಪ್ರಿಯಾಂಕ್ ಧರ್ಮಸ್ಥಳ, ಅಕ್ಷಯ್ ಜೈನ್ ಅಳದಂಗಡಿ, ಅಜಯ್ ಎಸ್.ಡಿ.ಎಂ ಆಸ್ಪತ್ರೆ,ಉದ್ಯಮಿ ಶೀತಲ್ ಜೈನ್ ಪವರ್ ಆನ್ ಬೆಳ್ತಂಗಡಿ,ಸಮೃದ್ದ ಶಾಂತಿಸಾಗರ್ ಕನ್ಸ್ಟ್ರಕ್ಷನ್ ಉಜಿರೆ, ಉದ್ಯಮಿ ಪ್ರದೀಪ್ ಜೈನ್ ಶಿರ್ಲಾಲು, ಸುದ್ದಿ ಉದಯ ಪತ್ರಿಕೆಯ ಸಂತೋಷ್ ಪಿ ಕೋಟ್ಯಾನ್ ಬಳಂಜ, ಪ್ರವೀಣ್ ಗ್ಯಾರೇಜ್ ಉಜಿರೆ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು ಶುಭ ಹಾರೈಸಿದರು.

ಟೀಚರ್ಸ್ ಕೋ ಅಪರೇಟಿವ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ರವೀಂದ್ರ ಶೆಟ್ಟಿ ಬಳಂಜ ನಿರೂಪಿಸಿದರು. ಮೆಡಿಕಲ್ ಮಾಲೀಕರಾದ ಜಿತೇಶ್ ಜೈನ್-ಅನ್ವೇಷಾ ಜೈನ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

Related posts

ಮಡಂತ್ಯಾರು ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದಿಂದ ಹತ್ಯಡ್ಕ ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ ಶಾಲೆಗೆ ಟೇಬಲ್ ಕೊಡುಗೆ

Suddi Udaya

ಗೀತೆ ಜತೆ ಸಾಹಿತ್ಯ ಸಾಂಗತ್ಯ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಉಪನ್ಯಾಸ ಮಾಲಿಕೆಯ ನಾಲ್ಕನೆಯ ಅಧ್ಯಾಯ

Suddi Udaya

ಎಲ್‌.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ – ಕನ್ನಡ ಸಾಹಿತ್ಯದ ಪ್ರಕಾರಗಳು ಮತ್ತು ಸಾಹಿತ್ಯ ಬರವಣಿಗೆಯ ಕಾರ್ಯಾಗಾರ

Suddi Udaya

ಅರಸಿನಮಕ್ಕಿ: ನೇತ್ರಾಳ ನಿವಾಸಿ ಚೇತನ್ ದಾಮಲೆ ನಿಧನ

Suddi Udaya
error: Content is protected !!