April 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸೇತುವೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರೂ.14.25 ಕೋಟಿ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಮಳೆಯಿಂದ ಹಾನಿಗೀಡಾದ ಪ್ರದೇಶದಲ್ಲಿ ಗ್ರಾಮೀಣ ಜನತೆಯ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಶಾಸಕ ಹರೀಶ್ ಪೂಂಜರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಪ್ರಕಾರ ಕರ್ನಾಟಕ ಸರಕಾರವು ಲೋಕೋಪಯೋಗಿ ಇಲಾಖೆಯ ಮೂಲಕ ಈ ಕೆಳಗಿನ ಕಾಮಗಾರಿಗಳಿಗೆ ರೂ.14.25 ಕೋಟಿ ಅನುದಾನ ಬಿಡುಗಡೆ ಮಾಡಿದೆಯೆಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಮರಕಡದಿಂದ ಪುದುವೆಟ್ಟು ಗ್ರಾಮದ ಮಿಯ್ಯಾರು ಸಂಪರ್ಕ ರಸ್ತೆ ಅಭಿವೃದ್ಧಿ-ರೂ.4 ಕೋಟಿ, ಧರ್ಮಸ್ಥಳ-ತೋಟತ್ತಾಡಿ-ಚಿಬಿದ್ರೆ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ-ರೂ.2 ಕೋಟಿ, ಪುಯ್ಯ-ಉಳಿಯ-ಕಂಚಿನಡ್ಕ-ಮುರ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ-ರೂ.1 ಕೋಟಿ, ನಾರಾವಿ-ಪಾಣಾಲು-ಮಾವಿನಕಟ್ಟೆ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ-ರೂ.1ಕೋಟಿ, ಧರ್ಮಸ್ಥಳ ಮುಂಡಾಜೆ ರಸ್ತೆಯಲ್ಲಿ ಆಯ್ದ ಭಾಗಗಳಲ್ಲಿ ಸೇತುವೆ ನಿರ್ಮಾಣ- ರೂ.3.75 ಕೋಟಿ, ಉಜಿರೆ-ಇಂದಬೆಟ್ಟು ರಸ್ತೆಯ ಅಂಬಡಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣ-ರೂ.2.50 ಕೋಟಿ ಬಿಡುಗಡೆಗೊಂಡಿದ್ದು ಶೀಘ್ರವೇ ಕಾಮಗಾರಿ ಚಾಲನೆಯಾಗಲಿದೆಯೆಂದು ಶಾಸಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಲ್ಲಿ ವರ್ಷ ಕಾಮತ್ ರಿಂದ ಟೆಮ್ ದಿ ಟೈಮ್ ತರಬೇತಿ ಕಾರ್ಯಾಗಾರ

Suddi Udaya

ಬೆಳಾಲು: ಶ್ರೀಮತಿ ಸುಲೋಚನಾ ಎಸ್. ಕೆರ್ಮುಣ್ಣಾಯ ನಿಧನ

Suddi Udaya

ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಮಹಾಸಭೆ, ಸಮಿತಿ ರಚನೆ

Suddi Udaya

ಅಕ್ರಮ ಮದ್ಯ ಮಾರಾಟ ಪೊಲೀಸರ ದಾಳಿ

Suddi Udaya

ಬೆಳ್ತಂಗಡಿ ತಾ.ಪಂ. ನಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ

Suddi Udaya

ನೆರಿಯ: ಸಂಜೀವ ಗೌಡ ನಿಧನ

Suddi Udaya
error: Content is protected !!