January 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿಸಮಸ್ಯೆ

ವೇಣೂರು ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ವೇಣೂರು ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

ಬೆಳ್ತಂಗಡಿ : ವೇಣೂರು ವಲಯ ಅರಣ್ಯ ವ್ಯಾಪ್ತಿಯ ಚೆನ್ನೈತೋಡಿ, ಅಜ್ಜಿಬೆಟ್ಟು, ಎಲಿಯನಡುಗೋಡು, ಕುಕ್ಕಿಪಾಡಿ ಗ್ರಾಮಗಳ ವಿವಿಧ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಅಲ್ಲಲ್ಲಿ ಸಾರ್ವಜನಿಕರಿಗೆ ಕಂಡುಬರುತ್ತಿರುವ ಕಾರಣ ತುಳುನಾಡ ರಕ್ಷಣ ವೇದಿಕೆ ವಾಮದಪದವು ಘಟಕದ ವತಿಯಿಂದ ಅರಣ್ಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಾಲೋಚನ ಸಭೆಯನ್ನು 2024 ಡಿ.30 ರಂದು ನಡೆಸಿದ್ದು ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸಲು ತೀರ್ಮಾನಿಸಲಾಯಿತು.

ಪ್ರಸ್ತುತ ಚಿರತೆಯ ಓಡಾಟ ಹೆಚ್ಚಾಗಿ ಕಂಡುಬಂದಿರುವ ಚೆನ್ನೈತೋಡಿ ಗ್ರಾಮದ ಚೆನ್ನೈತೋಡಿ ಗುತ್ತು , ಗೋಂಜಗುತ್ತು ಹಾಗೂ ಎಲಿಯನಡುಗೋಡು ಗ್ರಾಮದ ಕುತ್ಲೋಡಿ ಎಂಬಲ್ಲಿ ಒಟ್ಟು ಮೂರು ಜಾಗಗಳಲ್ಲಿ ಸದ್ಯ ಅರಣ್ಯ ಇಲಾಖೆಯ ವತಿಯಿಂದ ಜ.3 ರಂದು ಬೋನು ಅಳವಡಿಸಿದ್ದು ಸಾರ್ವಜನಿಕರು ಹಾಗೂ ವೇಣೂರು ಅರಣ್ಯ ಇಲಾಖೆಯ ವತಿಯಿಂದ ಪ್ರತಿನಿತ್ಯ ನಿಗಾ ವಹಿಸಲಾಗುತ್ತಿದೆ.

ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಆಚಾರಿಯವರ ನಿರ್ದೇಶನದಂತೆ ವೇಣೂರು ಶಾಖೆ ಉಪವಲಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ವಿಶೇಷ ಕರ್ತವ್ಯ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಸುರೇಶ್, ಅರಣ್ಯ ವೀಕ್ಷಕರಾದ ಸುಖೇಶ್, ಸಂತೋಷ್, ಕರಾವಳಿ ರಕ್ಷಣಾ ವೇದಿಕೆಯ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ , ಸಾರ್ವಜನಿಕರಾದ ನಾರಾಯಣ ಸೇವಂತ, ಜನಾರ್ಧನ ಪೂಜಾರಿ, ಸುರೇಶ, ಪ್ರಮೋದ್ ಜೊತೆಯಲ್ಲಿದ್ದರು.

ಬೆಳ್ತಂಗಡಿಯ ಅಗ್ನಿಶಾಮಕ ದಳದ ಅಧಿಕಾರಿ ಉಸ್ಮಾನ್ ಮಾಹಿತಿ ನೀಡಿದರು.

Related posts

ಕರಾಯ : ಆಟೋರಿಕ್ಷಾಕ್ಕೆ ಟಿಪ್ಪರ್‌ ಲಾರಿ ಡಿಕ್ಕಿ: ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬೈಕ್ : ಇಂದಬೆಟ್ಟು ನಿವಾಸಿ ಜೋಶನ್ ಸ್ಥಳದಲ್ಲೇ ಸಾವು

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಸ್ತೆ ಕೆಸರುಮಯ: ವಾಹನ ಪರದಾಟ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ

Suddi Udaya

ವೇಣೂರು: ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವರನ್ನು ಅಂಬ್ಯುಲೆನ್ಸ್‌ನಲ್ಲಿ ವೇಣೂರಿನಿಂದ ಕೇವಲ 45 ನಿಮಿಷಗಳಲ್ಲಿ ಕೆಎಂಸಿ ಆಸ್ಪತ್ರೆಗೆ ತಲುಪಿಸಿದ ಚಾಲಕ ಪ್ರಸಾದ್

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಹೆತ್ತವರ ಸಭೆ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಸಾಧನಾ ಪ್ರಶಸ್ತಿ

Suddi Udaya
error: Content is protected !!