ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಜ.3ರಂದು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 12 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ರಕ್ಷಿತ್ ಪಣೆಕ್ಕರ, ನಾರಾಯಣ ಗೌಡ, ಉದಯ ಭಟ್ ಕೆ., ಡೀಕಯ್ಯ ಗೌಡ, ರುಕ್ಮಯ್ಯ ಗೌಡ, ಪ್ರಸಾದ್ ಎ., ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಉದಯ ಬಿ.ಕೆ., ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಅಶೋಕ ಪಿ., ಮಹಿಳಾ ಕ್ಷೇತ್ರದಿಂದ ಶೀಲಾವತಿ, ಶಾರದಾ ಆರ್ ರೈ, ಪ.ಜಾತಿ ಕ್ಷೇತ್ರದಿಂದ ಚಂದನ್ ಕುಮಾರ್ ಎ., ಪ. ಪಂಗಡ ಕ್ಷೇತ್ರದಿಂದ ದಿನೇಶ್ ನಾಯ್ಕ ಇವರುಗಳು ಆಯ್ಕೆಯಾಗಿದ್ದಾರೆ.