ಬೆಳ್ತಂಗಡಿ 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಲಿ ಇರುವ SMVA ಶಕ್ತಿ ಪರಿವರ್ತಕವನ್ನು 10MVA ಸಾಮರ್ಥ್ಯಕ್ಕೆ ಬದಲಾಯಿಸುವ ಕಾಮಗಾರಿಯನ್ನು ಹಾಗೂ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಗಲೀಕರಣ ಪ್ರಯುಕ್ತ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿಯನ್ನು ಮಾಡುವ ಹಮ್ಮಿಕೊಂಡಿರುವುದರಿಂದ ಜ .4 ರಂದು ಬೆಳಿಗ್ಗೆ ಗಂಟೆ:10:00ರಿಂದ ಮದ್ಯಾಹ್ನ ಗಂಟೆ:3:00ರ ತನಕ ಕೊಲ್ಲಿ, ಬಂಗಾಡಿ, ಕೊಯ್ಯರು, ಉಜಿರೆ, ಬೆಳಾಲು, ಪಟ್ರಮೆ, ಧರ್ಮಸ್ಥಳ ಟೆಂಪಲ್, ನಿಡ್ಲೆ , ಕನ್ಯಾಡಿ, ಅರಸಿನಮಕ್ಕಿ ಹಾಗೂ ಪುದುವೆಟ್ಟು 11ಕೆವಿ ಫೀಡರುಗಳ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ.