34.4 C
ಪುತ್ತೂರು, ಬೆಳ್ತಂಗಡಿ
January 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಾಹನಗಳ ಬ್ಯಾಟರಿ ಹಾಗೂ ಡಿಸೇಲ್ ಕಳ್ಳತನ

ಬೆಳ್ತಂಗಡಿ : ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿಯ ಕಾಮಗಾರಿ ಮುಗ್ರೋಡಿ ಕನ್ಸಟ್ರಕ್ಷನ್ ತೆಕ್ಕೆಗೆ ಬಂದ ನಂತರ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಅಲ್ಲಲ್ಲಿ ನಿಲ್ಲಿಸಿದ್ದ ಮುಗ್ರೋಡಿ ಕನ್ಸೆಕ್ಷನ್ ಸೇರಿದ ವಾಹನಗಳ ಬ್ಯಾಟರಿ ಹಾಗೂ ಡಿಸೇಲ್ ಗಳನ್ನು ಕಳವು ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಹೆದ್ದಾರಿಯ ಕಾಮಗಾರಿ ನಡೆಸಲು ದೊಡ್ಡ ದೊಡ್ಡ ಹಿಟ್ಯಾಚಿಗಳನ್ನು ಬಳಕೆ ಮಾಡಲಾಗುತ್ತಿದ್ದು, ದಿನದ ಕೆಲಸದ ನಂತರ ಈ ದೊಡ್ಡ ದೊಡ್ಡ ಹಿಟ್ಯಾಚಿಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಲಾಗುತ್ತಿದೆ. ಆದರೆ ಕಳ್ಳರು ಹಿಟ್ಯಾಚಿಗಳ ಬ್ಯಾಟರಿ ಮತ್ತು ಡೀಸೆಲ್ ಗೆ ಕನ್ನ ಹಾಕುತ್ತಿದ್ದಾರೆ.

ಹಿಟ್ಯಾಚಿಗಳಿಂದ ಸರಿ ಸುಮಾರು 20 ಬ್ಯಾಟರಿಗಳನ್ನು ಕಳ್ಳರು ಎಗರಿಸಿದ್ದಾರೆ. ರಾತ್ರಿ ಸಮಯದಲ್ಲಿ ಬರುವ ಕಳ್ಳರು ಬ್ಯಾಟರಿಗಳನ್ನು ಕದ್ದುಕೊಂಡು ಹೋಗುತ್ತಿದ್ದಾರೆ. ಸರಿ ಸುಮಾರು ಲಕ್ಷ ಬೆಲೆಬಾಳುವ ಬ್ಯಾಟರಿಗಳು ಈಗಾಗಲೇ ಕಳವಾಗಿದೆ.

ಬ್ಯಾಟರಿ ಕಳ್ಳತನದಿಂದ ಹೆದ್ದಾರಿಯ ಕಾಮಗಾರಿ ಕುಂಠಿತಗೊಳ್ಳುತ್ತಿದ್ದು, ಮುಗ್ರೋಡಿ ಕನ್ಸಟ್ರಕ್ಷನ್ ಸಂಸ್ಥೆಯ ವಾಹನಗಳ ಎಲ್ಲಾ ಕೆಲಸಗಳು ಮಂಗಳೂರಿನಲ್ಲಿ ನಡೆಯುತ್ತಿದೆ. ಬ್ಯಾಟರಿ ಕೂಡ ಮಂಗಳೂರಿನಿಂದ ಪೂರೈಕೆಯಾಗುತ್ತದೆ. ಹೀಗಾಗಿ ಬ್ಯಾಟರಿ ಇಲ್ಲದೆ ಹಿಟ್ಯಾಚಿಗಳು ಕೆಲಸ ಮಾಡಲು ಆಗುತ್ತಿಲ್ಲ. ಬ್ಯಾಟರಿ ಬರುವವರೆಗೆ ಕಾಮಗಾರಿ ಸ್ಥಗಿತಗೊಳ್ಳುತ್ತಿದೆ.

ಈ ಬಗ್ಗೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

Related posts

ಉಜಿರೆ : ಸಹಕಾರ ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡ ನಿಧನ

Suddi Udaya

ಉಜಿರೆ: ಜೆಸಿಐ ಬೆಳ್ತಂಗಡಿಯಿಂದ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಭೇಟಿ

Suddi Udaya

ವಾಯ್ಸ್ ಆಫ್ ಮಲ್ನಾಡ್ ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಫೈನಲ್ ಹಂತ ತಲುಪಿದ ಬಂದಾರುವಿನ ಕುಸುಮ ಎಂ ಎಸ್

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಮುಖರಿಂದ ಸೇವಾಧಾಮಕ್ಕೆ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಬಸವ ಜಯಂತಿ ಆಚರಣೆ

Suddi Udaya
error: Content is protected !!