ಕೊಕ್ಕಡ: ಹತ್ಯಡ್ಕ ಗ್ರಾಮದ ಕೊಡಂಗೆ ಮನೆ ನಿವಾಸಿ ಹರಿಹರ ಹೆಬ್ಬಾರ್ ಗೋಖಲೆ (92ವ)ರವರು ವಯೋ ಸಹಜದಿಂದ ಸ್ವಗೃಹದಲ್ಲಿ ಜ.3ರಂದು ನಿಧನರಾಗಿದ್ದಾರೆ.
ಉತ್ತಮ ಕೃಷಿಕರಾಗಿದ್ದ ಅವರು ಕರಕುಶಲ ವಸ್ತುಗಳನ್ನು ತಯಾರಿಸುವ ನಿಪುಣತೆ ಹೊಂದಿದ್ದರು. ಮೃತರು ಇಬ್ಬರು ಪುತ್ರರಾದ ಪ್ರಭಾಕರ್ ಹೆಬ್ಬಾರ್, ವಿಷ್ಣು ಹೆಬ್ಬಾರ್, ಪುತ್ರಿ ಸುಮಾ ಅಭ್ಯಂಕರ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.