ಆರಂಬೋಡಿ :ಇಲ್ಲಿಯ ಕುಂಟಾಲ ಪಲ್ಕೆ ನಿವಾಸಿ ಕು| ಆಶ್ವಿಯಾ ಜಿ (21) ಮನೆಯಿಂದ ನಾಪತ್ತೆಯಾದ ಘಟನೆ ಜ.4 ರಂದು ವರದಿಯಾಗಿದೆ.
ತಂದೆ ಗಿರಿಯಪ್ಪ ರವರ ದೂರಿನಂತೆ ಮಗಳು ಕುಮಾರಿ ಆಶ್ವಿಯಾ ಜಿ (21) ಎಂಬಾಕೆಯು ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸದ ನಂತರ ಮನೆಯಲ್ಲಿಯೇ ಇದ್ದವಳು ಜ.3ರಂದು ಮದ್ಯಾಹ್ನ 3:00 ಗಂಟೆಯಿಂದ ರಾತ್ರಿ 7:00 ಗಂಟೆಯ ಮದ್ಯದ ಅವಧಿಯಲ್ಲಿ ತಂದೆ ಮತ್ತು ಅವರ ಹೆಂಡತಿ ಶಾರದಾ ಎಂಬವರು ಚಿಕಿತ್ಸೆಯ ಬಗ್ಗೆ ಬಿ ಸಿ ರೋಡ್ ಗೆ ಹೋದ ಸಮಯ ಮನೆಯಿಂದ ಕಾಣೆಯಾಗಿದ್ದು, ಆಕೆಯ ಬಗ್ಗೆ ನೆರೆಕರೆ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರು ಪತ್ತೆಯಾಗಲಿಲ್ಲ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.