ಗುರುವಾಯನಕೆರೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿರುವ ಬಡವರ ಪರ ಹೋರಾಟ ಮಾಡಿದ, ಭ್ರಷ್ಟಾಚಾರವನ್ನು ಕಠಿಣವಾಗಿ ವಿರೋಧಿಸುತ್ತಿದ್ದ, ನೇರ ನಡೆ ನುಡಿಯ ನಾಯಕ, ಕುವೆಟ್ಟು ಪಂಚಾಯತ್ ನ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿರುವ ದಿ. ಕೆ ವಸಂತ ಬಂಗೇರ ರವರ ಪ್ರತಿಮೆಯನ್ನು ಗುರುವಾಯನಕೆರೆ, ಕಾರ್ಕಳ,ಮೂಡಬಿದರೆ ಕೂಡು ರಸ್ತೆಯ ಶಕ್ತಿನಗರ ಸರ್ಕಲ್ ನಲ್ಲಿ ಸ್ಥಾಪಿಸುವಂತೆ ಕುವೆಟ್ಟು ನಾಗರಿಕರಿಂದ ಕುವೆಟ್ಟು ಗ್ರಾಮ ಪಂಚಾಯತ್ ಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಗೋಪಿನಾಥ್ ನಾಯಕ್, ಮಹಮ್ಮದ್ ಹನೀಫ್, ಪೋಡಿಮೋನು, ಸಾಂತಪ್ಪ ಸಾಲಿಯಾನ್ , ಧನಂಜಯ್ ರಾವ್, ಸೀತಾರಾಮ ಶೆಟ್ಟಿ, ರಿಯಾಜ್ಮೊ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.