ಕುತ್ಲೂರು: ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ, ಅನಾರೋಗ್ಯ ಪೀಡಿತ ಬಡ ಜನರಿಗೆ, ಬಡ ವಿಧ್ಯಾರ್ಥಿಗಳಿಗೆ, ಅಶಕ್ತ ಬಂಧುಗಳಿಗೆ ಸಹಾಯ ಹಸ್ತ ಚಾಚುವ ಸದುದ್ದೇಶದಿಂದ ನಾರಾವಿ ಮಹಾ ಚಂಡಿಕಾ ಯಾಗದ ಶುಭ ದಿನದಂದು ಲೋಕಾರ್ಪಣೆಗೊಂಡ ಪರಸ್ಪರ ಸೇವಾ ಬ್ರಿಗೇಡ್ ಈದು ನಾರಾವಿ ಸಂಸ್ಥೆಯ ವತಿಯಿಂದ ಪ್ರಪ್ರಥಮ ಸೇವಾ ಯೋಜನೆಯ ಅಂಗವಾಗಿ ಬಡ ಕುಟುಂಬದದಿಂದ ಬಂದಿರುವ, ಸಮಾಜದಲ್ಲಿ ಇತರರಿಗೆ ಆದರ್ಶಪಾಯವಾಗಿ, ಅತ್ಯಂತ ಪ್ರಾಮಾಣಿಕತೆಯಿಂದ ಜೀವನ ಸಾಗಿಸುತ್ತಾ ಇದ್ದ, ಈಗ ಅನಾರೋಗ್ಯ ಪೀಡಿತರಾಗಿರುವ ಕುತ್ಲೂರು ಗ್ರಾಮದ ಲಕ್ಷ್ಮಣ್ ಆಚಾರ್ಯ ಇವರ ಚಿಕಿತ್ಸೆಗಾಗಿ ಧನ ಸಹಾಯವನ್ನು ನೀಡಲಾಯಿತು.