32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪರೀಕ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಪರೀಕ: ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಪರೀಕ ಇಲ್ಲಿ ಮಾ. 06 ರಂದು ಜರಗಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಡಿ ಹರ್ಷೇಂದ್ರ ಕುಮಾರ್‌ರವರ ನೇತೃತ್ವದಲ್ಲಿ ಜ.03 ರಂದು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದ ರಾಜರ್ಷಿ ಮೀಟೀಂಗ್ ಹಾಲ್‌ನಲ್ಲಿ ಜರಗಿತು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರವರು ಉಪಸ್ಥಿತರಿದ್ದು, ತಮ್ಮ ಸಂಪೂರ್ಣ ಸಹಕಾರವನ್ನು ತಿಳಿಸುತ್ತಾ ಯಾವ ರೀತಿ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ತನ್ನ ಅನುಭವದ ಮಾತುಗಳಿಂದ ತಿಳಿಸಿದರು. ಡಿ ಹರ್ಷೇಂದ್ರ ಕುಮಾರ್‌ರವರು ತಮ್ಮ ಶುಭನುಡಿಗಳಲ್ಲಿ ಊರಿನ ಎಲ್ಲಾ ಸಮುದಾಯದವರ ಸಹಕಾರವನ್ನು ಬಯಸಿ ಈ ಊರಿಗೆ ಮತ್ತು ಎಲ್ಲಾ ಜನರಿಗೆ ಅನುಕೂಲವಾಗುವಂತೆ ಶ್ರೀ ದೇವರ ಆಶೀರ್ವಾದದೊಂದಿಗೆ ಎಲ್ಲರೂ ಬಂದು ಭಾಗವಹಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಶಯವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊತ್ತೇಸರರು ಶ್ರೀನಿವಾಸ, ಪರೀಕ ಮಹಾಲಿಂಗೇಶ್ವರ ದೇವಸ್ಥಾನ, ಹೃಷಿಕೇಶ್ ಹೆಗ್ಡೆ , ಜನಜಾಗೃತಿ ವೇದಿಕೆ, ಜಿಲ್ಲಾಧ್ಯಕ್ಷ ಸತ್ಯಾನಂದ ನಾಯಕ್, ಹಿರೇಬೆಟ್ಟು ಬಿಲ್ಲವ ಸಂಘ, ಗೌರವಾಧ್ಯಕ್ಷ ನಾರಾಯಣ ಪೂಜಾರಿ, ಮೊಗವೀರ ಸಭಾ ಬೆಳ್ಳಂಪಳ್ಳಿ ಅಧ್ಯಕ್ಷ ಬಾಲು ಕೋಟ್ಯಾನ್, ಪಂಚಾಯತ್ ವಾರ್ಡ್ ಸದಸ್ಯ ಇಸ್ಮಾಯಿಲ್, ನಂದಕುಮಾರ್ ಉಡುಪಿ, ಗಣೇಶ್ ರಾವ್ ಉಡುಪಿ, ಮಹಾವೀರ ಅಜ್ರಿ ಧರ್ಮಸ್ಥಳ, ದುಗ್ಗೇಗೌಡ ಉಡುಪಿ, ಶ್ರೀ ಬಿ ಸೀತಾರಾಮ ತೋಳ್ವಾಡಿತ್ತಾಯ ಕಾರ್ಯದರ್ಶಿಗಳು ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಡಾ|| ಗೋಪಾಲ ಪೂಜಾರಿ, ಮುಖ್ಯವೈದ್ಯಾಧಿಕಾರಿಗಳು ಪರೀಕ ಸೌಖ್ಯವನ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯದೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Related posts

ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಗಳ ರಾಜ್ಯಮಟ್ಟದ ಮಾಸ್ಟರ್ ಮತ್ತು ಕ್ಯಾಪ್ಟನ್ ತರಬೇತಿ ಕಾರ್ಯಾಗಾರ ಸಂಪನ್ನ

Suddi Udaya

ಮಡಂತ್ಯಾರು ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ವೇಣೂರು: ಪಡ್ಡ೦ದಡ್ಕ ನಿವಾಸಿ ಪಿ .ಎಸ್ .ಅಬ್ದುಲ್ ಜಲೀಲ್ ನಿಧನ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

Suddi Udaya

ಉಜಿರೆ: ಮಿತ್ರ ಯುವಕ ಮಂಡಲದಿಂದ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ದಯಾ ವಿಶೇಷ ಶಾಲೆಯಲ್ಲಿ ದಿ.ಕೆ. ವಸಂತ ಬಂಗೇರರವರ 80ನೇ ವರ್ಷದ ಹುಟ್ಟುಹಬ್ಬ ಆಚರಣೆ

Suddi Udaya
error: Content is protected !!