ಇಂದಬೆಟ್ಟು: ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವವು ಕಾರ್ಕಳ ದಾನಶಾಲಾ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಜ.4 ರಿಂದ 10 ವರೆಗೆ ನಡೆಯಲಿದೆ.
ಇಂದು( ಜ.4) ತೋರಣ ಮುಹೂರ್ತ, ವಿಮಾನ ಶುದ್ಧಿ, ಯಕ್ಷರಾಧನೆ, ಧ್ವಜಾರೋಹಣ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ ನಡೆಯಿತು.
ಈ ವೇಳೆ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಸದಸ್ಯರು, ಬಂಗ್ವಾಡಿ ಮಾಗಣೆಯ ಸಮಸ್ತರು ಉಪಸ್ಥಿತರಿದ್ದರು.
ಸಂಜೆ ಶ್ರೀ ಕ್ಷೇತ್ರಪಾಲ ದೇವರಿಗೆ ಆರಾಧನಾ ಪೂರ್ವಕ ಕಲಾರೋಪಣೆ ನಡೆಯಲಿದೆ.