ಅರಸಿನಮಕ್ಕಿ: ಹತ್ಯಡ್ಕ ಸಹಕಾರಿ ಸಂಘದ ಚುನಾವಣೆಯು ಜ.8ರಂದು ನಡೆಯಲಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳ ಮನೆ ಮನೆ ಪ್ರಚಾರದ ‘ಮಹಾಭಿಯಾನ’ಕ್ಕೆ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಜ. 5ರಂದು ಚಾಲನೆ ನೀಡಿದರು.
ವೇದಿಕೆಯಲ್ಲಿ ಸಹಕಾರ ಭಾರತೀಯ ಅಭ್ಯರ್ಥಿಗಳಾದ ರಾಘವೇಂದ್ರ ನಾಯಕ್, ರಾಜು ಕೆ.ಸಾಲ್ಯಾನ್, ಕೊರಗಪ್ಪ ಗೌಡ ಪಡ್ಪು, ರತೀಶ್ ಗೌಡ, ವರದಶಂಕರ ದಾಮ್ಲೆ , ಮುರಳಿಧರ ಶೆಟ್ಟಿಗಾರ್, ಬೇಬಿ ಕಿರಣ್, ಕೃಷ್ಣಪ್ಪ ಗೌಡ, ಶ್ರೀಮತಿ ತಾರಾ ಚಿಪ್ಲುನ್ಕರ್, ಶ್ರೀಮತಿ ಗಂಗಾವತಿ, ಶ್ರೀಮತಿ ಬೇಬಿ, ನಾಗೇಶ್, ಶಿಶಿಲ ಗ್ರಾಪಂ ಅಧ್ಯಕ್ಷ ಸುದಿನ್ ಕೆ., ಅರಸಿನಮಕ್ಕಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಗಣೇಶ್ ಅರಸಿನಮಕ್ಕಿ,ಜಯಪ್ರಕಾಶ, ವಿನಯಚಂದ್ರ ಟಿ. ಶಿಬಾಜೆ ಗ್ರಾ.ಪಂ. ಉಪಾಧ್ಯಕ್ಷ ದಿನಕರ ಕುರುಪ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ‘ಮಹಾಭಿಯಾನ’ದ ಪ್ರಚಾರದ ತಂಡಕ್ಕೆ ಬೇಕಾದ ವಿವಿಧ ವಸ್ತುಗಳನ್ನು ಕರುಣಾಕರ ಶಿಶಿಲರ ವರಿಗೆ ಸಾಂಕೇತಿಕವಾಗಿ ನೀಡಲಾಯಿತು. ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.’ಮಹಾಭಿಯಾನ’ದ ಪ್ರಯುಕ್ತ ಅರಸಿನಮಕ್ಕಿ, ರೆಖ್ಯಾ, ಶಿಶಿಲ, ಶಿಬಾಜೆಯಲ್ಲಿ ತಂಡ ತಂಡವಾಗಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಲಿದ್ದಾರೆ. ರಾಘವೇಂದ್ರ ನಾಯಕ್ ಸ್ವಾಗತಿಸಿ, ವೃಶಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿ, ರತೀಶ್ ಗೌಡ ವಂದಿಸಿದರು.