April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು ಯುನಿಯನ್ ಬ್ಯಾಂಕಿನ ಜನಸ್ನೇಹಿ ಬ್ಯಾಂಕ್ ಅಧಿಕಾರಿ ಅಶೋಕ್ ಕೋಟ್ಯಾನ್ ರಿಗೆ ಬೀಳ್ಕೊಡುಗೆ ಹಾಗೂ ಮಡಂತ್ಯಾರು ಸೊಸೈಟಿ ಅಧ್ಯಕ್ಷ- ಸಿಇಒ ಗೂ ಸನ್ಮಾನ

ಬೆಳ್ತಂಗಡಿ: ಮಡಂತ್ಯಾರು ಯುನಿಯನ್ ಬ್ಯಾಂಕಿನ ಅತ್ಯಂತ ಜನಸ್ನೇಹಿ ಮ್ಯಾನೇಜರಾಗಿದ್ದು ಇದೀಗ ವರ್ಗಾವಣೆಗೊಂಡಿರುವ ಅಶೋಕ್ ಕೋಟ್ಯಾನ್ ಉಡುಪಿ ಅವರಿಗೆ ಬೀಳ್ಕೊಡುಗೆ ಹಾಗೂ ಮಡಂತ್ಯಾರು ಸಹಕಾರಿ ಸಂಘಕ್ಕೆ ಕೇವಲ 11 ಸೆಂಟ್ಸ್ ಜಾಗದಲ್ಲಿ ಅತ್ಯಪೂರ್ವ ಕಟ್ಟಡ ನಿರ್ಮಿಸಿ ಮಾದರಿ ಆಡಳಿತಗಾರನೆನಿಸಿದ ಸಹಕಾರಿ ಸಂಘದ ಅಧ್ಯಕ್ಷ ಅರವಿಂದ ಜೈನ್, ಸಿಇಒ ಜೋಕಿಂ ಡಿಸೋಜ ಅವರಿಗೆ ಸನ್ಮಾನ ಕಾರ್ಯಕ್ರಮ ಜ.4 ರಂದು ಮಡಂತ್ಯಾರಿನ ದುರ್ಗಾ ಹೊಟೇಲ್ ಆವರಣದಲ್ಲಿ ನಡೆಯಿತು.

ವಿಶೇಷವೆಂದರೆ ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿ ಹಿರಿಯ ಸಾಮಾಜಿಕ ಮುತ್ಸದ್ದಿ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಅವರು ವೈಯುಕ್ತಿಕ ನೆಲೆಯಲ್ಲಿ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಹಮ್ಮಿಕೊಂಡಿದ್ದರು.

ಲೆತೀಫ್ ಸಾಹೇಬ್ ಅವರು ಸ್ವ ಇಚ್ಛೆಯಿಂದ ಪ್ರತೀ ವರ್ಷ ಮಡಂತ್ಯಾರು ಆಸುಪಾಸಿನ ಕರ್ಣಾಟಕ ಬ್ಯಾಂಕ್, ಯೂನಿಯನ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಮತ್ತು ಮಡಂತ್ಯಾರು ಕೃಷಿಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕು ಮತ್ತು ಸಿಬ್ಬಂದಿಗಳನ್ನು ಆಹ್ವಾನಿಸಿ ಅವರಿಗೆ ಔತಣಕೂಟವನ್ನೂ ನಡೆಸಿಕೊಂಡು ಬರುತ್ತಿದ್ದಾರೆ.
ಜ.4 ರಂದು ನಡೆದ ಕಾರ್ಯಕ್ರಮದಲ್ಲಿ ಹಾಜಿ ಅಬ್ದುಲ್‌ ಲೆತೀಫ್ ಸಾಹೇಬ್ ಅವರೇ ಸನ್ಮಾನಿತರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು.


ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಮುಖ್ಯ ಅತಿಥಿಯಾಗಿದ್ದು ಸಂದರ್ಭೋಚಿತವಾಗಿ ಶುಭಕೋರಿದರು.
ಸಮಾರಂಭದಲ್ಲಿ ಮಾಲಾಡಿ ಗ್ರಾ.ಪಂ ಪಿಡಿಒ ರಾಜಶೇಖರ ಶೆಟ್ಟಿ, ಕರ್ಣಾಟಕ ಬ್ಯಾಂಕ್ ಕೊಲ್ಪೆದಬೈಲು ಶಾಖೆಯ ಮೆನೇಜರ್ ಪದ್ಮಪ್ರಸಾದ ಆಳ್ವ, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕುಮಾರ್ ನಾಯ್ಕ್, ಡಿಸಿಸಿ ಬ್ಯಾಂಕ್ ಮಡಂತ್ಯಾರು ಶಾಖೆಯ ಮೆನೇಜರ್ ಸೌಮ್ಯಾ, ಎಜಿಎಮ್ ಶೇಖ್ ಇನಾಯತುಲ್ಲಾ, ಅಬ್ದುಲ್ ಲೆತೀಫ್ ಸಾಹೇಬ್ ಅವರ ಸಹೋದರ ಶೇಖ್ ಜವಾಹರ್ ಅಲಿ, ಇಂಜಿನಿಯರ್ ಮುಸ್ತಫಾ, ಜಿ.ಪಂ ಮಾಜಿ ಸದಸ್ಯೆ ತುಳಸಿ ಹಾರಬೆ, ಮಡಂತ್ಯಾರಿನ ಹಿರಿಯ ಗಣ್ಯ ವ್ಯಕ್ತಿ ಅನಿಲ್ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.

ಸಮಾಜ ಸೇವಕ ಅಬ್ಬೋನು ಮದ್ದಡ್ಕ ಕಾರ್ಯಕ್ರಮ ಸಂಯೋಜಿಸಿದರು. ಸಹಕಾರಿ ಸಂಘದ ಮಾಜಿ ನಿರ್ದೇಶಕ ಅಬ್ದುಲ್ ರಹಿಮಾನ್ ಪಡ್ಪು ಧನ್ಯವಾದವಿತ್ತರು.

Related posts

ಕಳೆಂಜ ಅಮ್ಮಿನಡ್ಕ ಲೋಲಾಕ್ಷರ ಮನೆ ಪಂಚಾಂಗ ಕೆಡವಿದ ಪ್ರಕರಣ : ಆರಂಭಗೊಂಡ ಕಂದಾಯ – ಅರಣ್ಯ ಜಂಟಿ ಸರ್ವೆ

Suddi Udaya

ನಾಲ್ಕೂರು: ಬಿಜೆಪಿ ಬೂತ್ ಸಮಿತಿಯ ನೂತನ ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಜೈಮಾತಾ ಕಾರ್ಯದರ್ಶಿಯಾಗಿ‌ ಸಂದೇಶ್ ಶೆಟ್ಟಿ ರಾಮನಗರ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಆಟಿಡೊಂಜಿ ದಿನ

Suddi Udaya

ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಇದರ ವಿಸ್ತ್ರತ ಘಟಕ “ಅಗ್ರಿಲೀಫ್ 2.0” ಉದ್ಘಾಟನೆ

Suddi Udaya

ಬಂದಾರು: ಮೈರೋಳ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya

ಕೊಯ್ಯೂರಿನಲ್ಲಿ ಜಾಗದ ತಕರಾರು; ಕಾರ್ಮಿಕನ ಮೇಲೆ ಹಲ್ಲೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!