29.2 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಹಾಭಾರತ ಸರಣಿ ತಾಳಮದ್ಧಳೆಯುವ ಕಲಾವಿದ ಪ್ರವೀತ ಆಚಾರ್ಯರಿಗೆ ಶ್ರದ್ದಾಂಜಲಿ ಅರ್ಪಣೆ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯಲ್ಲಿ 59ನೇ ಕಾರ್ಯಕ್ರಮವಾಗಿ ಚಿತ್ರಾಂಗದಾ-ಉಲೂಪಿ ತಾಳಮದ್ದಳೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್.ಬಿ ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ದೇವಿ ಪ್ರಸಾದ್ ಆಚಾರ್ಯ ಮಡಂತ್ಯಾರು, ಅರ್ಥದಾರಿಗಳಾಗಿ ದಿವಾಕರ ಆಚಾರ್ಯ ಹಳೆನೇರೆಂಕಿ ( ಚಿತ್ರವಾಹನ ) ಜಯರಾಮ ಬಲ್ಯ ( ಚಿತ್ರಾಂಗದೆ ಮತ್ತು ದುರ್ಜಯ) ಶ್ರೀಧರ ಎಸ್ ಪಿ ಸುರತ್ಕಲ್ (ಅರ್ಜುನ ) ಪೂರ್ಣಿಮಾ ರಾವ್ ಬೆಳ್ತಂಗಡಿ (ಉಲೂಪಿ) ಸಂಜೀವ ಪಾರೆಂಕಿ (ಕೌರವ್ಯ ) ದಿವಾಕರ ಆಚಾರ್ಯ ಗೇರುಕಟ್ಟೆ (ವಿಕಟ) ಭಾಗವಹಿಸಿದ್ದರು. ಸುರೇಶ್ ಪುತ್ತೂರಾಯ ಊರುವಾಲು ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.

ಶ್ರದ್ದಾಂಜಲಿ ಅರ್ಪಣೆ: ಇತ್ತೀಚೆಗೆ ರಸ್ತೆ ದುರಂತದಲ್ಲಿ ನಿಧನರಾದ ಸಸಿಹಿತ್ಲು ಮೇಳದ ಯುವ ಕಲಾವಿದ ಬೆಳ್ತಂಗಡಿ ಮುಂಡೂರಿನ ಪ್ರವೀತ್ ಆಚಾರ್ಯ ಇವರಿಗೆ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಶ್ರದ್ಧಾಂಜಲಿ ಅರ್ಪಿಸಿದರು .
ಎಳೆಯ ಪ್ರಾಯದಲ್ಲಿ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿರುವುದು ಹೆತ್ತವರಿಗೂ, ಕಲಾಕ್ಷೇತ್ರಕ್ಕೂ ದೊಡ್ಡನಷ್ಟವೆಂದು ನುಡಿನಮನ ಸಲ್ಲಿಸಿದ ಸಂಘದ ಉಪಾಧ್ಯಕ್ಷ ಸಂಜೀವ ಪಾರೆಂಕಿ ತಿಳಿಸಿದರು. ಮೃತರ ಸದ್ಗತಿಗಾಗಿ ಪ್ರಾರ್ಥಿಸಲಾಯಿತು.

Related posts

ಅಳದಂಗಡಿಯಲ್ಲಿ ಬಿಜೆಪಿ ಬೃಹತ್ ಪ್ರಚಾರ ಸಭೆ: ಸಿಂಗಂ ಖ್ಯಾತಿಯ ಅಣ್ಣಾಮಲೈಯಿಂದ ಹರೀಶ್ ಪೂಂಜರ ಪರ ಮತ ಪ್ರಚಾರ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಂಜನಾ ಎಂ.ಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಸಾರಿ ಮೇಳ: ಸೀರೆಗಳ ಮೇಲೆ ಶೇ.50 ಡಿಸ್ಕೌಂಟ್: ಕೆಲವೇ ದಿನಗಳು ಮಾತ್ರ

Suddi Udaya

ಯಶೋಧ ಕೃಷ್ಣ ವೀಡಿಯೋ ಸ್ಪರ್ಧೆ: ಕಲ್ಮಂಜದ ರಿದ್ವಿ ಡಿ.ಆರ್ ಹಾಗೂ ಭಕ್ತಿ ಜಿ. ವಿನ್ನರ್

Suddi Udaya

ಬೆಳ್ತಂಗಡಿ ವಾಣಿ ಕಾಲೇಜಿನಲ್ಲಿ ಕಾನೂನು ಮಾಹಿತಿ ಶಿಬಿರ

Suddi Udaya

ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೃತಜ್ಞತಾ ಸಮಾರಂಭ

Suddi Udaya
error: Content is protected !!