ಬಂದಾರು : ಬಂದಾರು ಗ್ರಾಮದ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವರ ಪ್ರತಿಷ್ಠಾಷ್ಟಬಂಧ ಬಹ್ಮಕಲಶೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಕ್ವಿಂಟಾಲ್ ಅಕ್ಕಿ ಹೊರೆಕಾಣಿಕೆ ಸಮರ್ಪಣೆ ಜ 06 ರಂದು ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಉಗ್ರಾಣದಿಂದ ಟಿಪ್ಪರ್ ವಾಹನದಲ್ಲಿ ಬಂದ ಹೊರೆಕಾಣಿಕೆಯನ್ನು ಶ್ರೀ ಸಿದ್ದಿವಿನಾಯಕ ದೇವರ ಸನ್ನಿದಿಯಲ್ಲಿ ಅರ್ಚಕರಾದ ಅನಂತರಾಮ ಶಬರಾಯವರು ಪೂಜೆ ನೆರವೇರಿಸಿ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಪ್ರಧಾನ ಸಂಚಾಲಕರಾದ ಬಾಲಕೃಷ್ಣ ಪೂಜಾರಿ ಬಜಗುತ್ತು, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ, ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಗೌಡ ಅಡ್ಡಾರು, ಭಜನಾ ಮಂಡಳಿ ಅಧ್ಯಕ್ಷರು ಲಕ್ಷ್ಮಣ ಗೌಡ, ಅನುವಂಶೀಯ ಆಡಳಿತ ಮೊಕ್ತೇಸರರಾದ ಕುಕ್ಕಪ್ಪಗೌಡ, ಪ್ರಚಾರ ಸಮಿತಿ ದಿನೇಶ್ ಗೌಡ ಅಡ್ಡಾರು ಹಾಗೂ ವಿವಿಧ ಸಮಿತಿ ಸಂಚಾಲಕರು, ಸಹ ಸಂಚಾಲಕರು, ಸರ್ವ ಸದಸ್ಯರು, ಭಕ್ತ ವೃoದದವರು ಉಪಸ್ಥಿತರಿದ್ದರು.