ಕುವೆಟ್ಟು: ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ಕರಿಂಜೆ ಇದರ ಪ್ರಥಮ ಶಾಖೆಯ ಉದ್ಘಾಟನೆಯು ಜ.05 ರಂದು ವಿಶ್ರುತ್ ಕಾಂಪ್ಲೆಕ್ಸ್ ಮದ್ದಡ್ಕದಲ್ಲಿ ನಡೆಯಿತು.
ಉದ್ಘಾಟಕರಾಗಿ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಗಮಿಸಿ ನಾವು ಸದಸ್ಯರಲ್ಲಿ ಪ್ರೀತಿ ವಿಶ್ವಾಸ ನಂಬಿಕೆಯನ್ನು ಗಳಿಸಿಕೊಳ್ಳಬೇಕು. ಇದೊಂದು ಇದ್ದರೆ ಶಾಖೆಯನ್ನು ಇನ್ನು ಎತ್ತರಕ್ಕೆ ಬೆಳೆಸಬಹುದು. ಜಾತಿ ಭೇದವೆನ್ನದೆ ಉತ್ತಮವಾದ ಸೇವೆಯನ್ನು ನೀಡಿ ಈ ಶಾಖೆಯು ಇನ್ನು ಎತ್ತರಕ್ಕೆ ಏರಿ ಹೆಮ್ಮರವಾಗಿ ಬೆಳೆಯಲಿ ಎಂದು ಆಶೀರ್ವಚಿಸಿದರು.
ದಿವ್ಯ ಉಪಸ್ಥಿತಿಯಲ್ಲಿದ್ದ ಶ್ರೀ ಶೀಮುಕ್ತಾನಂದ ಸ್ವಾಮೀಜಿಯವರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಲ್ಲಿ ಸಂಸ್ಥೆಯು ಯಶಸ್ವಿಯನ್ನು ಹೊಂದಲು ಸಾಧ್ಯ ಎಂದು ಆಶೀರ್ವಚಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗುರುಪ್ರಸಾದ್ ಬಂಗೇರ, ಪ್ರಾಂತೀಯ ಅಧಿಕಾರಿ, ಮೈಸೂರ್ ಪ್ರಾಂತ್ಯ ಇವರು ಸಂಸ್ಥೆಯು ನಗು ಮುಖದ ಸೇವೆಯನ್ನು ನೀಡುತ್ತಿರುವುದರಿಂದ ಶಾಖೆಯನ್ನು ತೆರೆಯಲು ಸಾಧ್ಯವಾಯಿತು ಎಂದು ತಿಳಿಸಿರುತ್ತಾರೆ.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಸುಧಾಕರ್ ನೂಯಿ ಇವರು ಶಾಖೆಯಲ್ಲಿ ಶಿಬಿರವನ್ನು ಏರ್ಪಡಿಸುವ ಬಗ್ಗೆ ಪ್ರಸ್ತಾಪ ಮಾಡಿರುತ್ತಾರೆ. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್.ಶೆಟ್ಟಿ , ಮಂಗಳೂರು ಜಿಲ್ಲಾ ಸೌಹಾರ್ದಗಳ ಒಕ್ಕೂಟ ಅಧ್ಯಕ್ಷ ಭಾಸ್ಕರ ದೇವಸ್ಯ, ಕೆ.ಶ್ರೀಪತಿ ಭಟ್ಸ್ ಉದ್ಯಮಿಗಳು ಮೂಡಬಿದ್ರೆ, ಗಂಗಾಧರ ಭಟ್ ಕೆವುದೇಲು ಮದ್ದಡ್ಕ, ಹರಿದಾಸ್ ಕೆ ಮಾಲಕರು ವಿಶ್ರುತ್ ಕಾಂಪ್ಲೆಕ್ಸ್ ಮದ್ದಡ್ಕ, ಬೆಳ್ತಂಗಡಿ ಜಮಯ್ಯತುಲ್ ಪಲಾಹ್ ಘಟಕ ಕೋಶಾಧಿಕಾರಿ ಅಬ್ಬೋನ್, ಕುಸುಮ ಕರಿಂಜೆ, ಚೇತನ್ ಜಿಲ್ಲಾ ಒಕ್ಕೂಟ ಸಿಇಓ ಭಾಗವಹಿಸಿದ್ದರು. ಗ್ರಾಮ ಸಮೃದ್ಧಿಯ ಅಧ್ಯಕ್ಷರು ಸ್ವಾಗತಿಸಿ ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿವರ್ಗ ಹಾಜರಿದ್ದರು. ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿಯ ಸಿಇಓ ಶ್ರೀಮತಿ ಶಶಿಕಲಾ ವಂದಿಸಿದರು.