ಮಲವಂತಿಗೆ ಗ್ರಾಮದ ಸಸಿತೋಟ ಎಳನೀರು ನಿವಾಸಿ ಪ್ರಶಾಂತ್ ವೈ.ಆರ್ ರವರ ಮನೆಯು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆ ಸಂಪೂರ್ಣ ಸುಟ್ಟುಹೋಗಿದ್ದು ಅಪಾರ ನಷ್ಟ ಉಂಟಾದ ಘಟನೆ ಜ.4 ರಂದು ನಡೆದಿದೆ.
ಸಂಜೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು ಮನೆಯು ಸಂಪೂರ್ಣ ಹೊತ್ತಿಹೋಗಿದ್ದು ಮನೆಯಲ್ಲಿದ್ದ ಸುಮಾರು ರೂ.2 ಲಕ್ಷದ ಮೊತ್ತದ ಅಡಿಕೆ, ಒಂದು ಲಕ್ಷ ಮೊತ್ತದ ಕಾಫಿ ಬೀಜ, ಸುಮಾರು 50 ಸಾವಿರ ಮೊತ್ತದ ಕಾಳುಮೆಣಸು ಅಲ್ಲದೆ ಸಂಪೂರ್ಣ ಬಟ್ಟೆ ಬರೆ ಹಾಗೂ ಸುಮಾರು ಎರಡು ಲಕ್ಷ ರೂ. ಮೊತ್ತದ ನಗ ನಗದು ಅಲ್ಲದೆ ಪಾತ್ರೆ ಪರಿಕರಗಳ ನಾಶವಾಗಿರುತ್ತದೆ. ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಮನೆಯ ರೀಪು, ಪಕ್ಕಾಸು, ಹಂಚು ಇತ್ಯಾದಿ ನಾಶವಾಗಿದ್ದು ರೂ. 30 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
ಸ್ಥಳಕ್ಕೆ ಮಲವಂತಿಗೆ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಕಾಶ್ ಕುಮಾರ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದರು.