31.2 C
ಪುತ್ತೂರು, ಬೆಳ್ತಂಗಡಿ
April 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ : ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ವಾರ್ಷಿಕ ಕಾರ್ಯಚುಟುವಟಿಕೆಗಳ ಸಮಾರೋಪ

ಉಜಿರೆ: ಭಾರತದ ಪ್ರಾಚೀನತನವಾದ ಹಾಗೂ ದೇವ ಭಾಷೆಯೆಂದು ಪ್ರಸಿದ್ಧವಾದ ಭಾಷೆಯೊಂದಿದ್ದರೆ ಅದು ಸಂಸ್ಕೃತವೇ ಆಗಿದೆ. ಭಾಷಾ ಕಲಿಕೆಯೂ ಸಹ ಶಿಕ್ಷಣದೊಂದಿಗೆ ಸಂವಹನ ಕಲೆ ಹಾಗೂ ಕೌಶಲ್ಯಕ್ಕೆ ಬುನಾದಿಯೇ ಸರಿ. ಇದರೊಂದಿಗೆ ಸೃಜನಶೀಲ ಚಟುವಟಿಕೆ ಇದ್ದರೆ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ಸಾಧ್ಯ. ಇವೆಲ್ಲ ಮೌಲ್ಯಯುತ ಜೀವನಕ್ಕೆ ರಹದಾರಿಯಾಗಿದೆ. ಒಟ್ಟಾರೆ ಮೌಲ್ಯಯುತ ಜೀವನ ಪಾಠಕ್ಕೆ ಸಂಸ್ಕೃತ ಭಾಷೆ ಮುಖ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯ ಕುಮಾರ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ , ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ವಾರ್ಷಿಕ ಕಾರ್ಯಚುಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಆಯ್ದ ಸಂಸ್ಕೃತ ಭಾಷಾ ವಿದ್ಯಾರ್ಥಿಗಳಿಗೆ ದಿ. ಕೋಟೇಶ್ವರ ಕೃಷ್ಣ ಐತಾಳ್ ಸ್ಮಾರಕ ವಿದ್ಯಾರ್ಥಿವೇತನ ನೀಡಿ ಮಾತನಾಡಿದರು.

ಇನ್ನೋರ್ವ ಅಭ್ಯಾಗತರಾದ ಉಜಿರೆಯ ಶ್ರೀ ಧ.ಮಂ ಸನಿವಾಸ ಪ.ಪೂ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ಮಹೇಶ್ ಭಟ್ ಮಾತನಾಡಿ ಸಂಸ್ಕೃತ ಭಾಷೆ ಹಾಗೂ ಭಾರತೀಯ ಸಂಸ್ಕೃತಿಗಳು ಭಾರತದ ಪ್ರತಿಷ್ಠಿತ ವಿಚಾರಗಳಾಗಿವೆ. ಸಂಸ್ಕೃತ ಕೇವಲ ಅಧ್ಯಾತ್ಮ , ಪೂಜಾದಿಗಳಿಗೆ ಮಾತ್ರ ಸೀಮಿತವಾಗಿರದೆ ವಿಜ್ಞಾನದಂತಹ ಅನೇಕ ಮಹತ್ತರ ಮೂಲ ವಿಷಯಗಳು ಇವೆ ಎಂದು ಹೇಳಿದರು.

ಶ್ರೀ ಧ.ಮಂ ಪ.ಪೂ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಧ.ಮಂ ಪದವಿ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ಶ್ರೇಯಸ್ ಪಾಳಂದೆ ಉಪಸ್ಥಿತರಿದ್ದರು.

ಸಂಸ್ಕೃತ ಭಾಷಾ ವಿದ್ಯಾರ್ಥಿಗಳಾದ ನೀರೇಶ್ , ಗುರುಕಿರಣ್ , ಕೆ. ಕ್ಷಮಾ ಹಾಗೂ ಸುಮನಾ ಅವರಿಗೆ ದಿ. ಕೋಟೇಶ್ವರ ಕೃಷ್ಣ ಐತಾಳ್ ಸ್ಮಾರಕ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಾಲ್ಮೀಕಿ ಹಾಗೂ ರಾಮಾಯಣ ಮಹತ್ವ ತಿಳಿಸುವ ವಾಲ್ಮೀಕಿ ಸ್ಮೃತಿ ಎನ್ನುವ ಗಮಕ ವಾಚನ ಪ್ರವಚನ ಕಾರ್ಯಕ್ರಮ ನಡೆಯಿತು. ಶ್ರೇಯಸ್ ಪಾಳಂದೆ ವಾಚನ ಮಾಡಿ , ಡಾ.ಪ್ರಸನ್ನಕುಮಾರ ಐತಾಳ್ ಪ್ರವಚನ ಮಾಡಿದರು.

ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಸಂಯೋಜಕ ರಜತ್ ಪಡ್ಕೆ ಸ್ವಾಗತಿಸಿ , ಅಜಯ್ ವಿದ್ಯಾರ್ಥಿ ವೇತನ ಪಡೆದವರ ಮಾಹಿತಿ ನೀಡಿದರು. ಸುಮೇಧಾ ನಿರೂಪಿಸಿ , ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ ವಂದಿಸಿದರು.

Related posts

ಕಲ್ಮಂಜ ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya

ಸೌಜನ್ಯ ಅತ್ಯಾಚಾರ ಪ್ರಕರಣ: ನೈಜ ಆರೋಪಿಗಳ ಪತ್ತೆಗಾಗಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅವಹೇಳನ ಮಾಡದಂತೆ ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮ ದೇವಸ್ಥಾನದಲ್ಲಿ ಪ್ರಾರ್ಥನೆ

Suddi Udaya

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

Suddi Udaya

ಕನ್ಯಾಡಿ ಸರಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya

ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಸೆಬಾಸ್ಟಿಯನ್ ಪಿ.ಟಿ. ಕಳೆಂಜ ನೇಮಕ

Suddi Udaya

ರಕ್ಷಿತ್ ಶಿವರಾಂ ಬೆಂಗಳೂರಿನಿಂದ ಬೆಳ್ತಂಗಡಿಗೆ ಆಮದು ಆದ ನಾಯಕನಾದರೆ, ಬೆಂಗಳೂರಿನಲ್ಲಿದ್ದ ಹರೀಶ್ ಪೂಂಜ ಬೆಳ್ತಂಗಡಿಗೆ ಆಮದು ಆಗಿ ಚುನಾವಣೆಗೆ ನಿಲ್ಲಲಿಲ್ಲವೇ: ಧರಣೇಂದ್ರ ಕುಮಾರ್

Suddi Udaya
error: Content is protected !!