29.2 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರ ಭಾರತಿ ಅಭ್ಯರ್ಥಿಗಳ ಆಯ್ಕೆ

ಕೊಕ್ಕಡ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025-30 ರ ಸಾಲಿನ ಆಡಳಿತ ಮಂಡಳಿ ಚುನಾವಣೆ ಜ. 27 ರಂದು ನಡೆಯಲಿದ್ದು, ಬಡೆಕಾಯಿಲ್ ಉಮೇಶ್ ಗೌಡರ ಮನೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳನ್ನು ಕಾರ್ಯಕರ್ತರ ಸಮ್ಮುಖದಲ್ಲಿ ಸಹಮತದಿಂದ ಜ. 5 ರಂದು ಆಯ್ಕೆ ಮಾಡಿ ಘೋಷಿಸಲಾಯಿತು.

ಪಟ್ರಮೆ ಶಕ್ತಿ ಕೇಂದ್ರ ಪ್ರಮುಖ್ ಮನೋಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಡಲ ಪ್ರಭಾರಿ ಪ್ರೀತಮ್ ಡಿ. ಧರ್ಮಸ್ಥಳ, ಡಿ. ಸಿ. ಸಿ ಬ್ಯಾಂಕ್ ನಿರ್ದೇಶಕರು ಹಾಗೂ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಈಶ್ವರ್ ಭಟ್ ಹಿತ್ತಿಲು, ಕೊಕ್ಕಡ ಶಕ್ತಿ ಕೇಂದ್ರ ಪ್ರಮುಖ್ ಪ್ರಶಾಂತ್ ಪೂವಾಜೆ, ಎಸ್. ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ್ ಕುರ್ಲೆ, ಮಂಡಲ ಸ್ತರದ ಪ್ರಮುಖರು ಬೂತ್ ಅಧ್ಯಕ್ಷರುಗಳಾದ ಕಿರಣ್, ಶಶಿ ಕುಮಾರ್, ಲಿಂಗಪ್ಪ ಗೌಡ, ಕಮಲಾಕ್ಷ ಗುಂಡಿಲೇ, ಕಾರ್ಯದರ್ಶಿಗಳಾದ ರವಿಚಂದ್ರ, ಶ್ರೀಧರ್ ಡಿ. ಕೆ. ಕಿಶೋರ್ ಪೋಯ್ಯೋಲೆ ಮತ್ತು ಕೊಕ್ಕಡ- ಪಟ್ರಮೆ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಬೆಳ್ತಂಗಡಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಳಂಬಿಲ ಸಹಕಾರ ಭಾರತೀಯ 12 ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಅಭ್ಯರ್ಥಿಗಳಾಗಿ ಕುಶಾಲಪ್ಪ ಗೌಡ ಪೂವಾಜೆ, ವಿಠಲ್ ಭಂಡಾರಿ, ವಿಶ್ವನಾಥ್ ಕಕ್ಕುದೋಲಿ, ಪದ್ಮನಾಭ ಕಾಯಿಲ, ಪ್ರೇಮಾವತಿ ಕಲ್ಲಾಜೆ, ಶ್ರೀನಾಥ್ ಬಡೆಕಾಯಿಲ್, ಸುನಿಲ್ ಕೊಲ್ಲಾಜೆ, ಉದಯ್ ರಾವ್ ಅನಾ‌ರು, ಮಹಾಬಲ ಶೆಟ್ಟಿ ಪರತ್ತಿಮಾರು ಪಟ್ಟೂರು, ಅಶ್ವಿನಿ ರವಿ ನಾಯ್ಕ ಓಣಿತ್ತಾರ್, ಮುತ್ತಪ್ಪ ಕೊಕ್ಕಡ, ರವಿಚಂದ್ರ ಪುಡಿಕೆತ್ತೂರ್ ಮುಂತಾದ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ.

Related posts

ಕಾಶಿಪಟ್ನ: ಸಮೀಪದ ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ, ಕಾರಣ ಪೋಲೀಸ್ ತನಿಖೆಯಿಂದ ತಿಳಿಯಬೇಕಷ್ಠೆ.

Suddi Udaya

ನಾಳ ದೇವಸ್ಥಾನದಲ್ಲಿ ಭೀಷ್ಮಾರ್ಜುನ ತಾಳಮದ್ದಳೆ

Suddi Udaya

ಉಜಿರೆ: 35 ಮಂದಿ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿಯ ಸಮಾರೋಪ

Suddi Udaya

ಬಳಂಜ ಎಲ್ಯೋಟ್ಟು ರಾಜು ಪೂಜಾರಿ-ಶ್ರೀಮತಿ ಕಮಲ ಹಾಗೂ ಬಾಬು ಪೂಜಾರಿ-ಶ್ರೀಮತಿ ಪ್ರೇಮಾ ದಂಪತಿಗಳ 50ನೇ ವರ್ಷದ ವೈವಾಹಿಕ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋ. ಬಿಸಿ ಟ್ರಸ್ಟ್ ಗುರುವಾಯನಕೆರೆ-ಕಣಿಯೂರು ವಲಯ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya
error: Content is protected !!