29.9 C
ಪುತ್ತೂರು, ಬೆಳ್ತಂಗಡಿ
April 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜ.15: ಮಾಜಿ ಶಾಸಕ ದಿ| ಕೆ. ವಸಂತ ಬಂಗೇರರ 79ನೇ ಹುಟ್ಟುಹಬ್ಬದ ಪ್ರಯುಕ್ತ ‘ಬೃಹತ್ ರಕ್ತದಾನ’ ಶಿಬಿರ

ಬೆಳ್ತಂಗಡಿ: ಸುಮಾರು 5 ದಶಕಗಳ ಕಾಲ ರಾಜಕೀಯ ರಂಗದಲ್ಲಿ ತನ್ನದೇ ಆದ ರೀತಿಯಲ್ಲಿ ಪ್ರಾಮಾಣಿಕ, ಭ್ರಷ್ಟಚಾರ ರಹಿತ ಸೇವೆ ಸಲ್ಲಿಸಿ, ಜನ ಸೇವೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಜಾತ್ಯಾತೀತ ಮನೋಧರ್ಮದಿಂದ ನೇರ ನಡೆ ನುಡಿಯ ನಿಷ್ಟುರವಾದಿ ಮಾತೃ ಹೃದಯದ ವ್ಯಕ್ತಿತ್ವ ಹೊಂದಿ ಶುದ್ಧ ರಾಜಕಾರಣ ನಡೆಸಿ ಕಳೆದ ವರ್ಷ ಮೇ 08 ರಂದು ವಿಧಿವಶರಾದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ರೂವಾರಿ ಮಾಜಿ ಶಾಸಕರಾದ ಕೆ. ವಸಂತ ಬಂಗೇರರ 79 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ವರ್ಷಂಪ್ರತಿ ಅವರ ಹುಟ್ಟುಹಬ್ಬದ ದಿನದಂದು ನಡೆಸಿಕೊಂಡು ಬರುತ್ತಿದ್ದ ‘ಬೃಹತ್ ರಕ್ತದಾನ’ ಶಿಬಿರವನ್ನು ಜ.15 ರಂದು ಬೆಳ್ತಂಗಡಿಯ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಹೇಳಿದರು.

ಅವರು ಜ.6 ರಂದು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರಕ್ತದಾನಿಗಳು, ಬಂಗೇರರ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಪೂರ್ವಾಹ್ನ 9.30 ರಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಘಟಕಕ್ಕೆ ರಕ್ತದಾನಿಗಳಿಂದ ರಕ್ತದಾನ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.ಬೆಳಗ್ಗೆ 10.30 ರಿಂದ ಕೀರ್ತಿಶೇಷ ಕೆ. ವಸಂತ ಬಂಗೇರರ ಬಗ್ಗೆ ವಿಶೇಷ ಉಪನ್ಯಾಸ, ಉಪನ್ಯಾಸಕರು ಡಾ| ತುಕಾರಾಮ ಪೂಜಾರಿ ಮುಖ್ಯಸ್ಥರು ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠ, ಬಂಟ್ವಾಳ , ದಯಾ ವಿಶೇಷ ಶಾಲಾ ಮಕ್ಕಳಿಗೆ ಸಮಿತಿ ವತಿಯಿಂದ ಊಟದ ವ್ಯವಸ್ಥೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೀರ್ತಿಶೇಷ ಕೆ.ವಸಂತ ಬಂಗೇರ ಅಭಿಮಾನಿಗಳ ಸಮಿತಿ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ಕೋಶಾಧಿಕಾರಿ ಶೇಖರ್ ಕುಕ್ಕೇಡಿ, ಉಪಾಧ್ಯಕ್ಷ ಲೋಕೇಶ್ ಗೌಡ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಹುಟ್ಟುಹಬ್ಬ ಆಚರಣಾ ಸಮಿತಿಯ ಪ್ರಧಾನ ಸಂಚಾಲಕ ದೇವಿ ಪ್ರಸಾದ್ ಬೆಳ್ತಂಗಡಿ, ಲಕ್ಷ್ಮಣ ಗೌಡ, ಅಶ್ರಫ್ ನೆರಿಯ, ಯಶೋಧರ ಚಾರ್ಮಾಡಿ ಉಪಸ್ಥಿತರಿದ್ದರು.

Related posts

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಾರಾವಿ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಪುದುವೆಟ್ಟು : ಸ್ವರಾಜ್ ನೇಣುಬಿಗಿದು ಆತ್ಮಹತ್ಯೆ

Suddi Udaya

ಧರ್ಮಸ್ಥಳ: ನಾರ್ಯ ತಂಗಾಯಿ ಅರಣ್ಯದಲ್ಲಿ ಬೆಂಕಿ

Suddi Udaya

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರ ಸಾನಿಧ್ಯದಲ್ಲಿ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮೋತ್ಸವ

Suddi Udaya

ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ಸದಾಶಿವ ಊರ, ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

Suddi Udaya
error: Content is protected !!