24.8 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಮಡಂತ್ಯಾರು: ಯಂಗ್ ಟೈಗರ್ಸ್ ಅಲೆಕ್ಕಿ ಫ್ರೆಂಡ್ಸ್ ಇದರ 9ನೇ ವರ್ಷದ ವಾರ್ಷಿಕೋತ್ಸವ

ಮಡಂತ್ಯಾರು: ಯಂಗ್ ಟೈಗರ್ಸ್ ಅಲೆಕ್ಕಿ ಫ್ರೆಂಡ್ಸ್ ಇದರ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜ.5 ರಂದು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷೆ ರೂಪ ನವೀನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಗ್ರಾ.ಪಂ. ಸದಸ್ಯರಾದ ಹರೀಶ್ ಶೆಟ್ಟಿ ಪದೆಂಜಿಲಾ, ಉಮೇಶ್ ಸುವರ್ಣ ಉಪಸ್ಥಿರಿದ್ದರು.

ಸಂಘದ ಅಧ್ಯಕ್ಷ ಆಕಾಶ್ ಕೋಟೆ ಅಧ್ಯಕ್ಷತೆಯನ್ನು ವಹಿಸಿದ್ದರು. ವೀರ ಕೇಸರಿ ಆಂಬುಲೆನ್ಸ್ ಚಾಲಕ ದೀಕ್ಷಿತ್, ಕರ್ನಾಟಕ ಕ್ರೀಡಾ ರತ್ನ ಕಂಬಳ ಓಟಗಾರ ಸುರೇಶ್ ಎಂ ಶೆಟ್ಟಿ, ಇಂಚರ ಸೇವಾ ಬಳಗ ನಂದಳಿಕೆ ಇವರಿಗೆ ಸನ್ಮಾನಿಸಲಾಯಿತು.

ಕಾರ್ಯದರ್ಶಿ ಸಂದೀಪ್ ಕುಕ್ಕಳ ಸ್ವಾಗತಿಸಿ ಧನ್ಯವಾದವಿತ್ತರು. ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸಂಜೆ ಸ್ಥಳೀಯರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು. ಯಂಗ್ ಟೈಗರ್ ಅಲೆಕ್ಕಿ ಫ್ರೆಂಡ್ಸ್ ಸದಸ್ಯರು. ಹಾಗೂ ಕಾರ್ಯಕರ್ತರು ಊರವರು ಉಪಸ್ಥಿತರಿದ್ದರು.

:-ವರದಿ ಹರ್ಷ ಬಳ್ಳಮಂಜ

Related posts

ಹುಣ್ಸೆಕಟ್ಟೆ: ತೀರ ಹದಗೆಟ್ಟ ರಸ್ತೆ: ಪ.ಪಂ. ಅಧ್ಯಕ್ಷ ಜಯಾನಂದ ರಿಂದ ಕೂಡಲೇ ಸ್ಪಂದನೆ

Suddi Udaya

ಎಸ್. ಡಿ. ಎಮ್ ಪ.ಪೂ. ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಸ್ಪೆಕ್ಟ್ರಾ ಅಸೋಸಿಯೇಷನ್ ನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಲಾಯಿಲ: ಗುರಿಂಗಾನ ಸೇತುವೆ ಹಾನಿಗೊಳಗಾಗಿದ್ದು ಸ್ಥಳಕ್ಕೆ ವಿ.ಪ. ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ಕೊಯ್ಯೂರು ಬಜಿಲ ಶಾಲಾ ಕಟ್ಟಡ ದುರಸ್ತಿಗಾಗಿ ಧರ್ಮಸ್ಥಳದಿಂದ 50 ಸಾವಿರ ದೇಣಿಗೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಉಜಿರೆ ಟೆಕ್ಸ್ ಟೈಲ್ಸ್ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೆಲಸಕ್ಕೆ ಬಂದ ಮಹಿಳೆಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

Suddi Udaya
error: Content is protected !!