ಗೇರುಕಟ್ಟೆ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್( ರಿ) ಎಸ್. ಎಸ್. ಎಫ್ ಇದರ ಗೇರುಕಟ್ಟೆ ಯೂನಿಟ್ ವಾರ್ಷಿಕ ಮಹಾಸಭೆಯು ಜ.5 ರಂದು ಗೇರುಕಟ್ಟೆ ಮಸೀದಿ ವಠಾರದಲ್ಲಿ ನಡೆಯಿತು.
ಯೂನಿಟ್ ಅಧ್ಯಕ್ಷ ಫಯಾಝ್ ಕೆ. ಎಮ್ ಇವರ ಸಬಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಗುರುವಾಯನಕೆರೆ ಸೆಕ್ಟರ್ ರೈ0ಬೋ ಕಾರ್ಯದರ್ಶಿ ಸುಹೈಳ್ ಗೋವಿಂದೂರ್ ಉದ್ಘಾಟಿಸಿದರು. ಯೂನಿಟ್ ಕಾರ್ಯದರ್ಶಿ ದಾವೂದ್ ಸ್ವಾಗತಿಸಿ ವರದಿ ಮಂಡನೆ ಮಾಡಿದರು. ಕೋಶಾಧಿಕಾರಿ ನೌಷದ್ ಜೀ ಲೆಕ್ಕಪತ್ರ ವಾಚಿಸಿದರು. ಗುರುವಾಯನಕೆರೆ ಸೆಕ್ಟರ್ ಅಧ್ಯಕ್ಷ ನೌಫಲ್ ಸಖಾಫಿ ಅಳದಂಗಡಿ ವೀಕ್ಷಕರಾಗಿ ಆಗಮಿಸಿ 2025-26 ನೇ ಸಾಲಿನ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ನೌಷದ್ ಜೀ. ,ಉಪಾಧ್ಯಕ್ಷರಾಗಿ ಇಹತ್ತಿಷಮ್ ಪುರ್ಕಾನಿ, ಪ್ರದಾನ ಕಾರ್ಯದರ್ಶಿಯಾಗಿ ಶಂಶಿರ್, ಕೋಶಾಧಿಕಾರಿಯಾಗಿ ನಾಸಿರ್ ಜೀ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಾಯೀದ್, ಕ್ಯೂಡಿ ಕಾರ್ಯದರ್ಶಿಯಾಗಿ ಫತಿನ್, ದಆವಾ ಕಾರ್ಯದರ್ಶಿಯಾಗಿ ಸಾವಾದ್ ಸಅದಿ, ಜೀಡಿ ಕಾರ್ಯದರ್ಶಿ ಯಾಗಿ ಇಲ್ಯಾಸ್, ರೈ0ಬೋ ಕಾರ್ಯದರ್ಶಿ ಯಾಗಿ ಹಾಶಿಮ್ ಇವರು ಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪರಪ್ಪು ಎಸ್.ವೈಎಸ್ ನಾಯಕರಾದ ರೆಹಮಾನ್ ಉಪಸ್ಥಿತಿಯೊಂದಿಗೆ ನೂತನ ಕಾರ್ಯದರ್ಶಿ ಶಂಶಿರ್ ಧನ್ಯವಾದ ತಿಳಿಸಿದರು.