23.6 C
ಪುತ್ತೂರು, ಬೆಳ್ತಂಗಡಿ
April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಮಾಣಿಲ ಮಾತೃಭೂಮಿ ಯುವ ವೇದಿಕೆ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಿಶೇಷ ಕಾರ್ಯಾಗಾರ

ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ ಜ.7 ರಂದು ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಿಶೇಷ ಕಾರ್ಯಾಗಾರ ಸರಕಾರಿ ಪ್ರೌಢ ಶಾಲೆ ಮಾಣಿಲ ಇಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ Epiance Software Pvt Ltd. ಇದರ ಡೈರೆಕ್ಟರ್ ಸತೀಶ್ ನಾಯಕ್ ಅವರು ಮಾತನಾಡಿ ತಿಳುವಳಿಕೆ ಎಂಬುವುದು ಬೆಳಗುತ್ತಿರುವ ದೀಪದಂತೆ ಅದನ್ನು ನಾವು ಇನ್ನೊಬ್ಬರಿಗೆ ಹಂಚಿ ಕೊಳ್ಳುವುದರಿಂದ ಅದು ಎಲ್ಲೆಡೆಯೂ ಪಸರಿಸುತ್ತದೆ ಹಾಗೆಯೇ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಮತ್ತು ನಂತರ ಯಾವ ವಿಭಾಗವನ್ನು ಆಯ್ಕೆ ಮಾಡಬಹುದು ಹಾಗೂ ವಿದ್ಯಾರ್ಥಿಯು ಒಂದು ಮನೆಯ ಮಗುವಾಗಿ, ಶಾಲೆಯ ವಿದ್ಯಾರ್ಥಿಯಾಗಿ, ಊರಿನ ಪ್ರಜೆಯಾಗಿ ಮನೆಗೆ-ಶಾಲೆಗೆ-ಊರಿಗೆ ನಮ್ಮ ಕೊಡುಗೆ ಏನು ಎಂಬುವುದನ್ನು ಸವಿಸ್ತಾರವಾಗಿ ತಿಳಿಸಿ ಕೊಟ್ಟರು.
ಕಾರ್ಯಾಗಾರದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ ಮೇಡಂ ಮಾತನಾಡಿ ಮಾತೃಭೂಮಿ ಯುವ ವೇದಿಕೆ ಸಂಘದ ಕಾರ್ಯ ವೈಖರಿಯ ಬಗ್ಗೆ ಶ್ಲಾಘನೀಯ ಪ್ರಶಂಸೆಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಸೇನಾ ವಾಹನ ಆಯತಪ್ಪಿ ಕಂದಕಕ್ಕೆ ಉರುಳಿಬಿದ್ದು ಮೃತಪಟ್ಟ ಐವರು ಯೋಧರಾದ ಸುಬೇದಾರ್ ದಯಾನಂದ ತಿರಕಣ್ಣವರ್, ಲ್ಯಾನ್ಸ್ ಹವಾಲ್ದಾರ್ ಅನೂಪ್, ನಾಯಕ್ ಘಡ್ಗೆ ಶುಭ ಸಮಾಧಾನ್, ಸಿಪಾಯಿ ನಿಕುರೆ ದಿಗಂಬರ್ ಮತ್ತು ಸೆ.ಮಹೇಶ್ ಮರಿಗೊಂಡ್ ಇವರು ವೀರ ಮರಣವನ್ನು ಹೊಂದಿರುತ್ತಾರೆ. ದೇಶ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಈ ಯೋಧರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಹಾಗೆಯೇ ಕಳೆದ ಐದಾರು ತಿಂಗಳ ಅವಧಿಯಲ್ಲಿ ಹಿರಿಯರಾದ ದಿ| ಭುಜಂಗ ಆಚಾರ್ಯ, ದಿ| ನಾರಾಯಣ ಆಚಾರ್ಯ, ದಿ| ಅನಂತ ನಾಯಕ್, ದಿ| ಚಕ್ಕು ಮೇರಾ ಇವರನ್ನು ನಮ್ಮ ಗ್ರಾಮ ಕಳೆದು ಕೊಂಡಿದೆ. ಇವರಿಗೂ ಮತ್ತು ಯೋಧರ ಆತ್ಮಗಳಿಗೆ ಚಿರಶಾಂತಿಯನ್ನು ಕೋರುತ್ತಾ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ಕುಮಾರ್ ಕಕ್ವೆ ವಹಿಸಿದರು, ಸದಸ್ಯರಾದ ಮಿಥುನ್ ಕುಮಾರ್ ಇವರು ಸ್ವಾಗತಿಸಿ, ಸದಸ್ಯರಾದ ಶ್ರೀಮತಿ ಮಂಜುಳಜ್ಯೋತಿ ವಂದಿಸಿದರು. ಕು|ಮನ್ವಿ, ಕು|ವರ್ಷಾ ಮತ್ತು ಕು| ಆಶಿಕಾ ಪ್ರಾರ್ಥಿಸಿ, ಸದಸ್ಯೆ ಕು| ದೀಕ್ಷಾ ಕಾಪಿಕಾಡ್ ಇವರು ಕಾರ್ಯಕ್ರಮ ನಿರೂಪಿಸಿದರು.

Related posts

ಗುರುವಾಯನಕೆರೆ: ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಬ್ರಹ್ಮಕುಂಭಾಭಿಷೇಕದ ಪೂರ್ವಭಾವಿಯಾಗಿ- ಕೊಡಮಣಿತ್ತಾಯ ಸನ್ನಿಧಾನದಲ್ಲಿ ಚಂಡಿಕಾ ಹೋಮ ಹಾಗೂ ಮೃತ್ಯುಂಜಯ ಹೋಮ: ಮೆರವಣಿಗೆಯ ಮೂಲಕ ಮುಷ್ಟಿ ಕಾಣಿಕೆ ದೈವಕ್ಕೆ ಸಮಪ೯ಣೆ

Suddi Udaya

ಬಳಂಜ‌ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಯುವ ಸಾಧಕಿ ಮಾನ್ಯರವರಿಗೆ ಸನ್ಮಾನ

Suddi Udaya

ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘದ ವಾಷಿ೯ಕೋತ್ಸವ ಹಾಗೂ ವೇದ ಕುಸುಮ ಶಿಬಿರ ಉದ್ಘಾಟನೆ

Suddi Udaya

ಕಳೆಂಜ: ನಂದಗೋಕುಲ ಗೋಶಾಲೆಗೆ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭೇಟಿ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಾ. ಕೆ ಜಯಕೀರ್ತಿ ಜೈನ್ , ಉಪಾಧ್ಯಕ್ಷರಾಗಿ ಚಿದಾನಂದ ಎಸ್. ಹೂಗಾರ್ ಅವಿರೋಧ ಆಯ್ಕೆ

Suddi Udaya

ಮಾಲಾಡಿ: ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಪಿಕಪ್ ನಡುವೆ ಅಪಘಾತ

Suddi Udaya
error: Content is protected !!