January 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿರಾಜಕೀಯವರದಿ

“ನಾನು ರಾಜಕೀಯ ನಿವೃತ್ತಿ ನೀಡಿಲ್ಲ,: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರಿಂದ ಸ್ಪಷ್ಟನೆ

ಬೆಳ್ತಂಗಡಿ: ಕೋರ್ ಕಮಿಟಿ ಸಭೆ ವೇಳೆ ಹರೀಶ್ ಕುಮಾರ್ ರಾಜೀನಾಮೆ ನೀಡಿದ್ದಾಗಿ ಕೆಲವು ವೆಬ್‌ಸೈಟ್‌ಗಳಲ್ಲಿ ಸುದ್ದಿ ಪ್ರಕಟಗೊಂಡ ಹಿನ್ನಲೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರು “ನಾನು ರಾಜಕೀಯ ನಿವೃತ್ತಿ ನೀಡಿಲ್ಲ, ಕಿಡಿಗೇಡಿಗಳು ಸುಳ್ಳು ಸುದ್ದಿ ಹಂಚಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಇದು ಸತ್ಯಕ್ಕೆ ದೂರವಾದ ಸುದ್ದಿ. ನಾನು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದೆ. ಹೊಸ ವರ್ಷ ಪ್ರಯುಕ್ತ ಸಿಹಿ ಹಂಚಿದ್ದು ಹೌದು, ಭಾಷಣ ಮಾಡಿದ್ದೂ ಹೌದು. ಆದರೆ ಎಲ್ಲೂ ಕೂಡಾ ರಾಜೀನಾಮೆ ನೀಡುವುದಾಗಿ ಹೇಳಿಲ್ಲ ಎಂದರು.ಈ ಕುರಿತು ಹರೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಎರಡು ಅವಧಿ ಪೂರ್ಣಗೊಳಿಸಿದ್ದೇನೆ. ಎರಡು ವರ್ಷ ಹಿಂದೆಯೇ ರಾಜಿನಾಮೆ ಕೊಟ್ಟಿದ್ದೆ. ಆದರೆ ಚುನಾವಣೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಮುಂದುವರಿಯಲು ಹೈಕಮಾಂಡ್ ಸೂಚನೆಯಿತ್ತು. ಏಳು ವರ್ಷ ಏಳು ತಿಂಗಳಿನಿಂದ ಅಧ್ಯಕ್ಷನಾಗಿದ್ದೇನೆ. ಯಾರ ಹೆಸರನ್ನು ಹೈಕಮಾಂಡ್ ಪ್ರಕಟಿಸುತ್ತದೋ ಆಗಲೇ ನಾನು ಅಧ್ಯಕ್ಷ ಹುದ್ದೆ ಹಸ್ತಾಂತರಿಸುತ್ತೇನೆ. ರಾಜಕೀಯ ನಿವೃತ್ತಿಯ ಮಾತೇ ಬರುವುದಿಲ್ಲ ಎಂದು ಹರೀಶ್ ಕುಮಾರ್ ಸ್ಪಷ್ಟನೆ ನೀಡಿದರು.

Related posts

ಹೆದ್ದಾರಿ ಅಧಿಕಾರಿಗಳ ಗೈರು-ಕೋರಂ ಕೊರತೆ: ಕುವೆಟ್ಟು ಗ್ರಾಮಸಭೆ ಮುಂದೂಡಿಕೆ

Suddi Udaya

ಮರೋಡಿ : 22 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿವೃತ್ತರಾದ ಡಾ| ಎಲ್.ಹೆಚ್ ಮಂಜುನಾಥ್ ಅವರಿಗೆ ಸನ್ಮಾನ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ವಾರ್ಷಿಕ ಮಹಾಸಭೆ

Suddi Udaya

ಅಳದಂಗಡಿ ಪದ್ಮಾಂಭ ಕಾಂಪ್ಲೆಕ್ಸ್ ಮಾಲಕ ರವಿರಾಜ್ ಹೆಗ್ಡೆ ನಿಧನ

Suddi Udaya

ಮಾಚಾರು: ಕೋರ್ಯಾರು ನಿವಾಸಿ ಜಯಗೌಡ ನಿಧನ

Suddi Udaya
error: Content is protected !!