19.3 C
ಪುತ್ತೂರು, ಬೆಳ್ತಂಗಡಿ
January 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಸ್ ದರ ಏರಿಕೆ ಮಾಡಿರುವುದು ರಾಜ್ಯ ಸರಕಾರ ಜನರ ಬದುಕಿನ‌ ಮೇಲೆ ದಾಳಿ ಮಾಡಿದಂತಾಗಿದೆ : ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್

ಬೆಳ್ತಂಗಡಿ: ಜನರ ಕಲ್ಯಾಣಕ್ಕಾಗಿ ತಾನು ಹಲವು ಭರವಸೆಗಳನ್ನು ನೀಡಿ ಜಾರಿ ಮಾಡಿದ ಸರಕಾರ ಇಂದು ಅದೆಲ್ಲದಕ್ಕೂ ಬೆಲೆ ಏರಿಕೆ ಮೂಲಕ ತಿಲಾಂಜಲಿ ಇಟ್ಟಂತಾಗಿದೆ ಎಂದವರು ಸರಕಾರವನ್ನು ಟೀಕಿಸಿದರು.

ಬಸ್ ದರ ಏರಿಕೆಗೆ ತೈಲ ಬೆಲೆ ಏರಿಕೆ ಕಾರಣ ಎನ್ನುವ ಸರಕಾರ, ತೈಲ ಬೆಲೆ ಏರಿಕೆ ಮಾಡಲು ನಾವು ಜನರು ಒತ್ತಾಯಿಸಿದ್ದೇವೆಯೇ ಎಂದು ಅವರು ಪ್ರಶ್ನಿಸಿದರು. ಕೇಂದ್ರದ ಬಿಜೆಪಿ ಸರಕಾರ ಮೊದಲೇ ತೈಲ ಬೆಲೆ ಏರಿಸಿ ಜನರ ಹೊಟ್ಟೆ ಮೇಲೆ ಹೊಡತ ಕೊಟ್ಟಿತ್ತು. ಬೆಲೆ ಏರಿಕೆಯಿಂದ ಸೋತು ಸುಣ್ಣವಾಗಿ‌ದ್ದ ಜನತೆ ಬಿಜೆಪಿಯನ್ನು ಸೋಲಿಸಿ ಕಾಂಗ್ರೇಸನ್ನು ಗೆಲ್ಲಿಸಿದ್ದಾಗಿತ್ತು. ಇದೀಗ ಬಸ್ ದರ ಏರಿಕೆ ಮಾಡಿದ ರಾಜ್ಯ ಸರಕಾರದ ನಡೆಯಿಂದ ಮತ್ತಷ್ಟು ಬೆಲೆ ಏರಿಕೆಗೆ ಕಾರಣವಾಗಿದೆ. ತೈಲ ದರ ಏರಿಕೆಯಾಗಿದ್ದರಿಂದ ಬಸ್ ದರ ಏರಿಸಬೇಕಾಯಿತು‌ ಎಂದು ರಾಜ್ಯ ಸರಕಾರ ಸಮರ್ಥನೆ ಮಾಡವುದು ಸರಿಯಲ್ಲ. ಇದರ ಬದಲಾಗಿ ತಾನೂ ಏರಿಸಿದ ತೈಲ ತೆರಿಗೆಯನ್ನು ಇಳಿಸಿ ಕೇಂದ್ರ ಸರಕಾರವೂ ತೈಲ ಬೆಲೆಯ ಮೇಲಿನ ಸುಂಕವನ್ನು ಕೈಬಿಡುವಂತೆ ಒತ್ತಾಯಿಸಬೇಕಿತ್ತು ಎಂದರು.

ಆದರೆ ಗಾಯದ ಮೇಲೆ‌ ಬರೆ ಎಳೆದಂತೆ ದುಬಾರಿಯಾಗಿ ಬಸ್ ದರ ಏರಿಕೆ ಮಾಡಿರುವುದು ಖಂಡನೀಯ. ಈ ಬಸ್ ದರ ಏರಿಕೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ ಹಾಗೂ ಈ ದರ ಏರಿಕೆ ವಿರುದ್ದ ಹೋರಾಟ ನಡೆಸುತ್ತೇವೆ ಎಂದವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

Related posts

ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದು ಸ್ಥಳ ಪರಿಶೀಲನೆ ವೇಳೆ ಗ್ರಾಮ ಆಡಳಿತ ಅಧಿಕಾರಿಯ ಮೇಲೆ ಹಲ್ಲೆ ಆರೋಪ: ಹಲ್ಲೆ ಮಾಡಿರುವ ಆರೋಪಿತರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಪೊಲೀಸ್ ಉಪನಿರೀಕ್ಷಕರಿಗೆ ಸೂಕ್ತ ನಿರ್ದೇಶನ ನೀಡಲು ಜಿಲ್ಲಾಧಿಕಾರಿಗಳಿಗೆ ಪತ್ರ

Suddi Udaya

ಬಸದಿ ಸ್ವಚ್ಛತಾ ತಂಡದಿಂದ ವನಮಹೋತ್ಸವದ ಅಂಗವಾಗಿ ಪಕ್ಷಿ ಸಂಕುಲದ ರಕ್ಷಣೆಗಾಗಿ ಬೀಜಬಿತ್ತನೆ

Suddi Udaya

ನೆರಿಯ: ಕುಡುಮಡ್ಕ ಸೌಗಂಧಿಕ ಮನೆಯ ನೀಲಮ್ಮ ನಿಧನ

Suddi Udaya

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ: ಬಿಜೆಪಿ ಶಾಸಕರುಗಳಿಂದ ವಿಧಾನ ಸೌಧದ ಎದುರು ಭಿತ್ತಿಪತ್ರ ಪ್ರದರ್ಶನ: “ದಕ್ಷಿಣ ಕನ್ನಡ ತೆರಿಗೆ ಮುಸ್ಲಿಮರ ಮನೆಗೆ” ಗಮನ ಸೆಳೆದ ಶಾಸಕ ಹರೀಶ್ ಪೂಂಜ ಪ್ರದರ್ಶಿಸಿದ ಬಿತ್ತಿಪತ್ರ

Suddi Udaya

ಕುಕ್ಕೇಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

Suddi Udaya

ಬಳಂಜ ಬಿಲ್ಲವ ಸಂಘದಲ್ಲಿ, ಮಹಿಳಾ ಬಿಲ್ಲವ ವೇದಿಕೆಯ ನೇತೃತ್ವದಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ

Suddi Udaya
error: Content is protected !!