ಆರಂಬೋಡಿ : ಇಲ್ಲಿಯ ಹೊಕ್ಕಾಡಿಗೋಳಿ ಸಾರ್ವಜನಿಕ ಡಾಮಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಕಳವುವಾದ ಘಟನೆ ಜ.5 ರಂದು ನಡೆದಿದೆ.
ಬಂಟ್ವಾಳ ಕರ್ಪೆ ನಿವಾಸಿ ಜಗದೀಶ ಎಂಬುವರ ದೂರಿನಂತೆ ಜ.05 ರಂದು ಹೊಕ್ಕಾಡಿಗೋಳಿಯಲ್ಲಿ ನಡೆಯುತ್ತಿರುವ ಕಂಬಳ ನೋಡಲು ಬೈಕ್( KA 21Q1736) ನಲ್ಲಿ ಸಹೋದರ ದೀಕ್ಷಿತ್ ಎಂಬಾತನನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಹೊಕ್ಕಾಡಿಗೋಳಿ ತಲುಪಿ ಸಿದ್ದಕಟ್ಟೆ- ಆರಂಬೋಡಿ ರಸ್ತೆಯ ಆರಂಬೋಡಿ ಗ್ರಾಮದ ಹೊಕ್ಕಾಡಿಗೋಳಿ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಬೆಳಿಗ್ಗೆ ಬೈಕ್ ನಿಲ್ಲಿಸಿ ಕಂಬಳ ನೋಡಲು ಹೊಗಿದ್ದು ಕಂಬಳ ನೋಡಿ ವಾಪಾಸು ಮನೆಗೆ ಹೋಗುವರೇ ಸುಮಾರು ಮದ್ಯಾಹ್ನ ಬೈಕ್ ನಿಲ್ಲಿಸಿದ್ದಲ್ಲಿಗೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಸ್ಥಳದಿಂದ ಕಳವಾಗಿರುತ್ತದೆ, ಮೊಡೆಲ್ 2012 ನೇ ಇಸವಿ ಆಗಿರುತ್ತದೆ, ಇದರ ಬೆಲೆ ಸುಮಾರು 20000 ಆಗಬಹುದು ಎಂದು ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.