ಬಂದಾರು : ಬಂದಾರು ಗ್ರಾಮದ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ ಶುಭಸಂದರ್ಭದಲ್ಲಿ ಶ್ರೀ ಸಿದ್ದಿವಿನಾಯಕ ನೂತನ ಸಭಾಭವನದ ಉದ್ಘಾಟನಾ ಸಮಾರಂಭ ಜ 07 ರಂದು ನಡೆಯಿತು. ದೀಪ ಪ್ರಜ್ವಲಿಸುವ ಮೂಲಕ ಶ್ರೀ ಸಿದ್ದಿವಿನಾಯಕ ಸಭಾಭವನದ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜಾರವರು ನೆರವೇರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಹಾಬಲ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಶ್ರೀ ಕ್ಷೇತ್ರ ಸಮುದಾಯ ಪ್ರಾದೇಶಿಕ ಅಭಿವೃದ್ಧಿ ವಿಭಾಗ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಗೌಡ ಅಡ್ಡಾರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಭಾಭವನದ ದಾನಿಗಳಾದ ಕುಕ್ಕಪ್ಪ ಗೌಡ ಕೋಡಿಮಜಲು, ಹೊನ್ನಪ್ಪ ಗೌಡ ಸೋಣಕುಮೇರು, ಶ್ರೀಮತಿ ಗಿರಿಜ ಅಂಗಡಿಮಜಲು, ಉಮೇಶ್ ಗೌಡ ಅಂಗಡಿಮಜಲು, ಡೀಕಯ್ಯ ಗೌಡ ಕoಚರೊಟ್ಟು, ಶ್ರೀಮತಿ ಕಲ್ಯಾಣಿ ಹಾರ್ತ್ಯಾರು, ಇವರುಗಳಿಗೆ ಗೌರವಪೂರ್ವಕ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಪ್ರಧಾನ ಸಂಚಾಲಕರಾದ ಬಾಲಕೃಷ್ಣ ಪೂಜಾರಿ ಬಜಗುತ್ತು, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾದೆ,ಕೋಶಾಧಿಕಾರಿ ಕೇಶವ ಕೊಂಗುಜೆ, ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಗೌಡ,ಅರ್ಚಕರಾದ ಅನಂತರಾಮ ಶಬರಾಯ, ಅನುವಂಶೀಯ ಆಡಳಿಯ ಮೊಕ್ತೇಸರರಾದ ಕುಕ್ಕಪ್ಪ ಗೌಡ, ಉಪಸ್ಥಿತರಿದ್ದರು.
ಶ್ರೀನಿವಾಸ ಗೌಡ ಬಾಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.