ಬೆಳ್ತಂಗಡಿ: ಜನರ ಕಲ್ಯಾಣಕ್ಕಾಗಿ ತಾನು ಹಲವು ಭರವಸೆಗಳನ್ನು ನೀಡಿ ಜಾರಿ ಮಾಡಿದ ಸರಕಾರ ಇಂದು ಅದೆಲ್ಲದಕ್ಕೂ ಬೆಲೆ ಏರಿಕೆ ಮೂಲಕ ತಿಲಾಂಜಲಿ ಇಟ್ಟಂತಾಗಿದೆ ಎಂದವರು ಸರಕಾರವನ್ನು ಟೀಕಿಸಿದರು.
ಬಸ್ ದರ ಏರಿಕೆಗೆ ತೈಲ ಬೆಲೆ ಏರಿಕೆ ಕಾರಣ ಎನ್ನುವ ಸರಕಾರ, ತೈಲ ಬೆಲೆ ಏರಿಕೆ ಮಾಡಲು ನಾವು ಜನರು ಒತ್ತಾಯಿಸಿದ್ದೇವೆಯೇ ಎಂದು ಅವರು ಪ್ರಶ್ನಿಸಿದರು. ಕೇಂದ್ರದ ಬಿಜೆಪಿ ಸರಕಾರ ಮೊದಲೇ ತೈಲ ಬೆಲೆ ಏರಿಸಿ ಜನರ ಹೊಟ್ಟೆ ಮೇಲೆ ಹೊಡತ ಕೊಟ್ಟಿತ್ತು. ಬೆಲೆ ಏರಿಕೆಯಿಂದ ಸೋತು ಸುಣ್ಣವಾಗಿದ್ದ ಜನತೆ ಬಿಜೆಪಿಯನ್ನು ಸೋಲಿಸಿ ಕಾಂಗ್ರೇಸನ್ನು ಗೆಲ್ಲಿಸಿದ್ದಾಗಿತ್ತು. ಇದೀಗ ಬಸ್ ದರ ಏರಿಕೆ ಮಾಡಿದ ರಾಜ್ಯ ಸರಕಾರದ ನಡೆಯಿಂದ ಮತ್ತಷ್ಟು ಬೆಲೆ ಏರಿಕೆಗೆ ಕಾರಣವಾಗಿದೆ. ತೈಲ ದರ ಏರಿಕೆಯಾಗಿದ್ದರಿಂದ ಬಸ್ ದರ ಏರಿಸಬೇಕಾಯಿತು ಎಂದು ರಾಜ್ಯ ಸರಕಾರ ಸಮರ್ಥನೆ ಮಾಡವುದು ಸರಿಯಲ್ಲ. ಇದರ ಬದಲಾಗಿ ತಾನೂ ಏರಿಸಿದ ತೈಲ ತೆರಿಗೆಯನ್ನು ಇಳಿಸಿ ಕೇಂದ್ರ ಸರಕಾರವೂ ತೈಲ ಬೆಲೆಯ ಮೇಲಿನ ಸುಂಕವನ್ನು ಕೈಬಿಡುವಂತೆ ಒತ್ತಾಯಿಸಬೇಕಿತ್ತು ಎಂದರು.
ಆದರೆ ಗಾಯದ ಮೇಲೆ ಬರೆ ಎಳೆದಂತೆ ದುಬಾರಿಯಾಗಿ ಬಸ್ ದರ ಏರಿಕೆ ಮಾಡಿರುವುದು ಖಂಡನೀಯ. ಈ ಬಸ್ ದರ ಏರಿಕೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ ಹಾಗೂ ಈ ದರ ಏರಿಕೆ ವಿರುದ್ದ ಹೋರಾಟ ನಡೆಸುತ್ತೇವೆ ಎಂದವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.