April 12, 2025
Uncategorized

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷ ನಿಷ್ಪಿಷ್ಟ ಸ್ಥಿತಿಗೆ ತಲುಪಿದಾಗ ಪಕ್ಷವನ್ನು ಕಟ್ಟಿ ಬೆಳೆಸಿದವರು ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್: ರಾಜಕೀಯ ನಿವೃತ್ತಿಯೆಂದು ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರಿಂದ ಆಗ್ರಹ: ಕೆಪಿಸಿಸಿ ಸದಸ್ಯ ಕೇಶವ ಪಿ. ಬೆಳಾಲು ಹಾಗೂ ಕಾಂಗ್ರೇಸ್ ಕಾರ್ಯಕರ್ತರಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ರವರು ರಾಜಕೀಯ ನಿವೃತ್ತಿ ಘೋಷಿಸುತ್ತಾರೆ ಎಂಬ ಶೀರ್ಷಿಕೆಯನ್ನು ಹಾಕಿ ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವುದು ವಿಷಾದನೀಯ. ಇದು ಸತ್ಯಕ್ಕೆ ದೂರವಾಗಿದ್ದು ಯಾವುದೇ ರೀತಿಯಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸಿಲ್ಲ. ಇದು ಯಾರೊ, ಸ್ವಹಿಡಿತಕ್ಕಾಗಿ ಯಾರನ್ನೋ ಬಳಸಿಕೊಂಡು ಮಾಡುತ್ತಿರುವ ಪಿತ್ತೂರಿ ಇದನ್ನು ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸುತ್ತೇವೆ ಎಂದು ಕೆಪಿಸಿಸಿ ಸದಸ್ಯ ಕೇಶವ ಪಿ. ಬೆಳಾಲು ಹೇಳಿದರು

ಅವರು ಜ.೮ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬೆಳ್ತಂಗಡಿ ತಾಲೂಕಿನಲ್ಲಿ ಕಾಂಗ್ರೆಸ್ ಅತ್ಯಂತ ನಿಷ್ಟಿಷ್ಟ ಸ್ಥಿತಿಗೆ ತಲುಪಿದಾಗ ಹರೀಶ್ ಕುಮಾರ್ ರವರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಮತ್ತೆ ಮೊದಲಿನಂತೆ ವಿಜೃಂಭಿಸಲು ಪಣತೊಟ್ಟವರು. ಪಕ್ಷದ ಕೆಲಸವನ್ನು ಚಾಚು ತಪ್ಪದೇ ಬಹಳ ನಿಷ್ಠೆಯಿಂದ ಮಾಡಿದವರು. ಪಕ್ಷ ವಹಿಸಿಕೊಟ್ಟಂತ ಎಲ್ಲ ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸಿ ಅದನ್ನು ಕರ್ತವ್ಯವೆಂದು ನಂಬಿ ಬದುಕಿದವರು. ೧೯೭೮ರ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೀಮತಿ ಇಂದಿರ ಗಾಂಧಿಯವರು ಸ್ಪರ್ಧಿಸಿದಾಗ ಜೀವ ಪಣಕ್ಕಿಟ್ಟು ಕೆಲಸ ಮಾಡಿದವರು ಕಾಂಗ್ರೆಸ್ ಪಕ್ಷದ ನಿಷ್ಠವಂತ ಕಾರ್ಯಕರ್ತರಾಗಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರು ಎಂದರು.

ಹರೀಶ್ ಕುಮಾರ್ ಅವರ ಸೇವೆಯನ್ನು ಗುರುತಿಸಿ ಹೈಕಮಾಂಡ್ ಜಿಲ್ಲಾಧ್ಯಕ್ಷನಾಗಿ ನೇಮಿಸಿ ಏಳು ವರ್ಷಗಳು ಕಳೆದಿವೆ. ಜಿಲ್ಲೆಯಲ್ಲಿ ಕೂಡ ಪಕ್ಷ ನಿಷ್ಠೆಯಿಂದ ಕೆಲಸವನ್ನು ಮಾಡಿಕೊಂಡು ಬಂದವರು.ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿ ಈಗಾಗಲೇ ಎರಡು ವರ್ಷ ಕಳೆದಿದ್ದರು ಅವರ ಸೇವೆಯನ್ನು ಗುರುತಿಸಿ ಪಕ್ಷದ ಹೈಕಮಾಂಡ್ ಇನ್ನೂ ಕೂಡ ಅವರನ್ನು ಅಧ್ಯಕ್ಷರಾಗಿ ಮುಂದುವರಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ ಎಂದರು.

ಅಚಲ ಪಕ್ಷ ನಿಷ್ಠೆ ಉಳ್ಳವರಾದ ಕೆ. ಹರೀಶ್ ಕುಮಾರ್ ರವರ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಯಾರು ಈ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೋ ಅವರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಮೋಹನ್ ಶೆಟ್ಟಿಗಾರ್, ಡಿಸಿಸಿ ಉಪಾಧ್ಯಕ್ಷ ಬಿ.ಎಂ. ಹಮೀದ್, ಕೆ. ಶೈಲೇಶ್ ಕುಮಾರ್ ಕುರ್ತೋಡಿ, ಬಿ.ಎ. ಹಮೀದ್ ಉಜಿರೆ, ಬೆಳ್ತಂಗಡಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಶ್ ಡಿ., ಪ್ರವೀಣ್ ವಿ.ಜಿ. ನಡ, ಪ್ರಭಾಕರ್ ಶಾಂತಿಗೋಡ್, ಕಾರ್ಮಿಕ ವಿಭಾಗದ ಪ್ರ. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಕುವೆಟ್ಟು ಗ್ರಾ.ಪಂ. ಮಾಜಿ ಸದಸ್ಯ ಸಲೀಂ ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಬೆಳಾಲು ಪ್ರೌಢಶಾಲೆ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮ

Suddi Udaya

ಸಂಪೂರ್ಣ ಹಾಳಾದ ಧರ್ಮಸ್ಥಳ-ಮುಳಿಕ್ಕಾರು ರಸ್ತೆ: ಶಾಲಾ ಮಕ್ಕಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣ, ಅಲ್ಲಲ್ಲಿ ಹೂತು ಹೋಗುವ ವಾಹನಗಳು

Suddi Udaya

ಚಾರ್ಮಾಡಿ ಶ್ರೀ ಕೃಷ್ಣ ಕುಂಬಾರರ ಗೆಳೆಯರ ಬಳಗದ ವತಿಯಿಂದ ಹಗ್ಗ ಜಗ್ಗಾಟ ಪಂದ್ಯಾಟ ಹಾಗೂ ನೃತ್ಯ ಸ್ಪರ್ಧೆ

Suddi Udaya

ಜ.26: ಕುವೆಟ್ಟು-ಓಡಿಲ್ನಾಳ ಮಹಮ್ಮಾಯಿ ದೇವಿಯ ಮಾರಿಪೂಜೆ ಹಾಗೂ ಗುಳಿಗ ದೈವದ ನೇಮೋತ್ಸವ

Suddi Udaya

ವೇಣೂರು- ಶ್ರೀ ಶಾರದಾ ಸೇವಾ ಟ್ರಸ್ಟ್ ,ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು,ಲಯನ್ಸ್ ಕ್ಲಬ್ (ರಿ)ವೇಣೂರು,ಹಾಗು ಪದ್ಮಾಂಬ ಕ್ಯಾಟರ್ಸ್ ಅಳದಂಗಡಿ ಇವರ ಸಹಭಾಗಿತ್ವದಲ್ಲಿ ದೀಪಾವಳಿ* ಪ್ರಯುಕ್ತ ದೋಸೆ ಹಬ್ಬ,ಗೂಡುದೀಪ ಹಾಗು ರಂಗೋಲಿ ಸ್ಪರ್ಧೆ

Suddi Udaya
error: Content is protected !!