ಬೆಳ್ತಂಗಡಿ: ಪಟ್ಟಣ ಪಂಚಾಯತ್ ಬೆಳ್ತಂಗಡಿ ನಾಲ್ಕನೇ ವಾರ್ಡಿನ ಹಿಂದೂ ರುದ್ರ ಭೂಮಿ ಗೆ ಅಮೃತ ನಗರವೋತ್ಪನ್ನ ಅನುದಾನದಿಂದ ರೂ 40 ಲಕ್ಷ ವೆಚ್ಚದಲ್ಲಿ ಶಿಲಾನ್ಯಾಸ ಕಾರ್ಯಕ್ರಮವು ಜ. 8ರಂದು ನಡೆಯಿತು.
ಶಿಲಾನ್ಯಾಸವನ್ನು ಪ.ಪಂ. ಅಧ್ಯಕ್ಷ ಜಯಾನಂದ ಗೌಡ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಸದಸ್ಯರಾದ ರಜನಿ ಕುಡ್ವ, ಲೋಕೇಶ್, ಜಗದೀಶ್, ಜನಾರ್ಧನ, ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೋಟ್ಯಾನ್, ಇಂಜಿನಿಯರ್ ಮಹಾವಿರ ಅರಿಗ ಉಪಸ್ಥಿತರಿದ್ದರು.