ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.8ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 9 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ.ಆದರೆ ಹೈಕೋರ್ಟಿನ ಆದೇಶ ಬರಬೇಕಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಫಲಿತಾಂಶ ಘೋಷಣೆ ಮಾಡದೇ ತಡೆ ಹಿಡಿದಿದ್ದಾರೆ.
ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳಾದ ಅಶೋಧರ ಎನ್,ತಾರನಾಥ ಗೌಡ,ನಾರಾಯಣ ರಾವ್,ಶಶಿಕಲಾ,ಶೀಲಾ,ರಾಮ್ ಕುಮಾರ್,ಶೀನಪ್ಪ,ಸುಧೀರ್ ಆರ್ ಸುವರ್ಣ,ಆನಂದ ಸಾಲಿಯಾನ್ 9 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಹಿಂದಿನ ಸಾಲಿನ ಅಧ್ಯಕ್ಷ ನವೀನ್ ಕೆ ಸಾಮಾನಿ,ದಿನೇಶ್,ಸುಧೀರ್ ಗೌಡ ಸೇರಿದಂತೆ ಮೂವರು ಪರಾಭವಗೊಂಡಿದ್ದಾರೆ.
ಕಾಂಗ್ರೇಸ್ ಬೆಂಬಲಿತಾ ಅಭ್ಯರ್ಥಿಗಳಾದ ಕುಶಾಲಪ್ಪ ಗೌಡ,ಚಿದಾನಂದ ಇಂಚರ,ಅಶೋಕ್ ಸುವರ್ಣ ಈ ಮೂವರು ಜಯ ಗಳಿಸಿದ್ದಾರೆ. ಪುಷ್ಪಾ ಮಲ್ಲಿಕಾ,ಗೋಪಾಲ,ಹರ್ಷ ಜೈನ್,ಕೃಷ್ಣಪ್ಪ ಪೂಜಾರಿ,ಪುಷ್ಪರಾಜ್,ಸಂಜೀವ, ಅಶ್ವಥ್,ಪ್ರಸಾದ್ ಪಿಂಟೋ 9 ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ ಎನ್.ಜೆ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ನ್ಯಾಯಾಲಯದ ಆದೇಶದ ಬಳಿಕ ಘೋಷಣೆ:
ಸಹಕಾರಿ ಸಂಘದ ಎರಡು ಮಹಾಸಭೆಗೆ ಗೈರು ಹಾಜರಾಗದ ಸಂಘದ ಸದಸ್ಯರಿಗೆ ಸಹಕಾರಿ ಸಂಘದ ನಿಯಮದಂತೆ ಸಂಘದ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಇಲ್ಲ. ಈ ಹಿನ್ನಲೆಯಲ್ಲಿ ಮತದಾನದ ಅವಕಾಶ ಕಳೆದುಕೊಂಡ ಸಂಘದ ಸದಸ್ಯರು ಬೆಂಗಳೂರು ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ಪಿಟಿಷನ್‌ನಂತ ನ್ಯಾಯಲಯ ಎಲ್ಲ ಸದಸ್ಯರಿಗೂ ಮತದಾನಕ್ಕೆ ಅನುಮತಿ ನೀಡಿ, ಮುಂದಿನ ಆದೇಶವನ್ನು ಕಾಯ್ದಿರಿಸಿದೆ. ನ್ಯಾಯಾಯಲದ ಆದೇಶದಂತೆ ಮತದಾನಕ್ಕೆ ಅನುಮತಿ ಪಡೆದಿರುವ ಸದಸ್ಯರು ಮತ ಚಲಾಯಿಸಿದ್ದು ಆ ಮತಗಳನ್ನು ಪ್ರತ್ಯೇಕವಾಗಿ ನಿರ್ವಹಿಸಿ, ಅಭ್ಯರ್ಥಿ, ಏಜಂಟರ ಸಮ್ಮುಖದಲ್ಲಿ ಎಣಿಕೆಯನ್ನು ಮಾಡಲಾಗಿದೆ. ಎಲ್ಲಾ ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಉಚ್ಚ ನ್ಯಾಯಾಲಯದ ಆದೇಶ ಬಂದ ನಂತರ ಚುನಾವಣಾಧಿಕಾರಿಗಳು ಘೋಷಣೆ ಮಾಡಲಿದ್ದಾರೆ.