ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ವಿರುದ್ದ ಜ. 07 ರಂದು ಖಾಸಗಿ ವೆಬ್ ನ್ಯೂಸ್ ವೊಂದರಲ್ಲಿ ಹಾಲಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಇವರು ರಾಜಕೀಯ ನಿವೃತಿ ಪೋಷಿಸಿದ್ದಾರೆಂದು ಸುಳ್ಳು ಸುದ್ದಿಯನ್ನು ಬಿತ್ತರಿಸಿ, ಕೆ. ಹರೀಶ್ ಕುಮಾರ್ ಇವರ ಅಭಿಮಾನಿಗಳಲ್ಲಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಸಂಶಯವನ್ನು ಉಂಟುಮಾಡುವಂತಹ ಮತ್ತು ಅವರಿಗೆ ಮಾನಹಾನಿ ಆಗುವಂತೆ ಸುದ್ದಿಯನ್ನು ಬಿತ್ತರಿಸಿದ್ದು, ಶಾಂತಿಯುತ ದಕ್ಷಿಣ ಕನ್ನಡದ ಜನರಲ್ಲಿ ಗೊಂದಲವನ್ನು ಸೃಷ್ಟಿಮಾಡುವಂತಹ ಕೀಲು ಮನೋಭಾವನೆಯ ಸುದ್ದಿಯನ್ನು ಹರಡಿರುತ್ತಾರೆ.
ಈ ವೆಬ್ ನ್ಯೂಸ್ ಇವರ ವಿರುದ್ದ ಸೂಕ್ತವಾದ ತನಿಖೆಯನ್ನು ಮಾಡಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೆಪಿಸಿಸಿ ಸದಸ್ಯರಾದ ಮೋಹನ್ ಶೆಟ್ಟಿಗಾರ್ ಉಜಿರೆ ಮತ್ತು ನ್ಯಾಯವಾದಿ ಕೇಶವ ಪಿ. ಬೆಳಾಲು ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕರಿಗೆ ದೂರನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಕುವೆಟ್ಟು ಗ್ರಾ.ಪಂ. ಮಾಜಿ ಸದಸ್ಯ ಸಲೀಂ,. ಡಿಸಿಸಿ ಉಪಾಧ್ಯಕ್ಷ ಬಿ.ಎಮ್. ಹಮೀದ್, ಕೆ. ಶೈಲೇಶ್ ಕುಮಾರ್ ಕುರ್ತೋಡಿ, ಬಿ.ಎ ಹಮೀದ್ ಉಜಿರೆ, ಬೆಳ್ತಂಗಡಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಜಗದೀಶ್, ಅಭಿನಂದನ್ ಹರೀಶ್ ಕುಮಾರ್, ಪ್ರವೀಣ್ ವಿ. ಜಿ ನಡ, ಪ್ರಭಾಕರ್ ಶಾಂತಿಗೋಡ್ ಉಪಸ್ಥಿತರಿದ್ದರು.