29.9 C
ಪುತ್ತೂರು, ಬೆಳ್ತಂಗಡಿ
April 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆರಂಬೋಡಿ: ರಸ್ತೆಯ ಬದಿ ನಿಲ್ಲಿಸಿದ ಬೈಕ್ ಕಳವು

ಆರಂಬೋಡಿ : ಇಲ್ಲಿಯ ಹೊಕ್ಕಾಡಿಗೋಳಿ ಸಾರ್ವಜನಿಕ ಡಾಮಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಕಳವುವಾದ ಘಟನೆ ಜ.5 ರಂದು ನಡೆದಿದೆ.

ಬಂಟ್ವಾಳ ಕರ್ಪೆ ನಿವಾಸಿ ಜಗದೀಶ ಎಂಬುವರ ದೂರಿನಂತೆ ಜ.05 ರಂದು ಹೊಕ್ಕಾಡಿಗೋಳಿಯಲ್ಲಿ ನಡೆಯುತ್ತಿರುವ ಕಂಬಳ ನೋಡಲು ಬೈಕ್( KA 21Q1736) ನಲ್ಲಿ ಸಹೋದರ ದೀಕ್ಷಿತ್‌ ಎಂಬಾತನನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಹೊಕ್ಕಾಡಿಗೋಳಿ ತಲುಪಿ ಸಿದ್ದಕಟ್ಟೆ- ಆರಂಬೋಡಿ ರಸ್ತೆಯ ಆರಂಬೋಡಿ ಗ್ರಾಮದ ಹೊಕ್ಕಾಡಿಗೋಳಿ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಬೆಳಿಗ್ಗೆ ಬೈಕ್ ನಿಲ್ಲಿಸಿ ಕಂಬಳ ನೋಡಲು ಹೊಗಿದ್ದು ಕಂಬಳ ನೋಡಿ ವಾಪಾಸು ಮನೆಗೆ ಹೋಗುವರೇ ಸುಮಾರು ಮದ್ಯಾಹ್ನ ಬೈಕ್ ನಿಲ್ಲಿಸಿದ್ದಲ್ಲಿಗೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಸ್ಥಳದಿಂದ ಕಳವಾಗಿರುತ್ತದೆ, ಮೊಡೆಲ್ 2012 ನೇ ಇಸವಿ ಆಗಿರುತ್ತದೆ, ಇದರ ಬೆಲೆ ಸುಮಾರು 20000 ಆಗಬಹುದು ಎಂದು ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಆಮಂತ್ರಣ ರಾಜ್ಯ ಸಮಿತಿಗೆ ಸದಸ್ಯರಾಗಿ ಹೆಚ್.ಕೆ ನಯನಾಡು ಆಯ್ಕೆ

Suddi Udaya

ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಾರ್ಯದ ಕಲ್ಲಾಜೆಯ ನಿವಾಸಿ ಯುವ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ

Suddi Udaya

ಶಿಬಾಜೆ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಬೆಳಾಲು ಪ್ರೌಢಶಾಲೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಭವಾನಿ ಮಾರ್ಪಾಲು, ಉಪಾಧ್ಯಕ್ಷರಾಗಿ ರಾಜೇಶ್ ಕುರ್ಕಿಲು

Suddi Udaya

ಉರುವಾಲು: ಗ್ರಾಮ ದೈವಗಳಿಗೆ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya

ಉಜಿರೆ ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಒಕ್ಕೂಟ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ

Suddi Udaya
error: Content is protected !!