25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನಲ್ಲಿ ಜ,06 ರಂದು ಸಂಸ್ಥಾಪಕರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ ಹೆಚ್ ಉದ್ಘಾಟಿಸಿ ,ಈ ಸಂಸ್ಥೆಯು ಇಷ್ಟು ಉತ್ತಮ ಮಟ್ಟದಲ್ಲಿ ಬೆಳೆಯಲು ಶಿಕ್ಷಕರ ಪರಿಶ್ರಮ ಮತ್ತು ಹೆತ್ತವರ ಶ್ರಮವೇ ಕಾರಣ ಎಂದರು. ಶಾಲಾ ಸಂಚಾಲಕರಾದ ಅಶ್ವಿತ್ ಕುಲಾಲ್ ಸಂಸ್ಕೃತಿ ಭರಿತವಾದ ಸಂಸ್ಥೆಯಲ್ಲಿ ಸಂಸ್ಥಾಪಕರ ಮಾರ್ಗದರ್ಶನವನ್ನು ಪಾಲಿಸಿದಲ್ಲಿ ನಾವು ಒಂದು ಒಳ್ಳೆಯ ಪಥದಲ್ಲಿ ಸಾಗಬಹುದು ಎಂದು ಕಿವಿಮಾತು ನೀಡಿದರು.

ಅತಿಥಿಯಾಗಿ ಹಳೆ ವಿದ್ಯಾರ್ಥಿಯಾದ ಪೂಜಿತ್ ಕುಲಾಲ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಓಮನ ಶುಭ ಹಾರೈಸಿದರು. ಹಾಗೆಯೇ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಜಾತ, ಉಪಾಧ್ಯಕ್ಷ ವಸಂತ ಪಡೀಲ್ ,ಕುಂಭಶ್ರೀ ವೈಭವ ಸಮಿತಿಯ ಉಪಾಧ್ಯಕ್ಷ ಸೋಮನಾಥ ಕೆ ವಿ , ಕುಂಭಶ್ರೀ ವೈಭವ ಸಮಿತಿಯ ಕಾರ್ಯದರ್ಶಿ ಗಣೇಶ್ ಕುಂದರ್ ಹಾಗೂ ಶೈಕ್ಷಣಿಕ ಶಿಕ್ಷಣ ಸಲಹೆಗಾರರಾದ ಶ್ರೀಮತಿ ಉಷಾ ಜಿ , ಶ್ರೀಮತಿ ದೀಕ್ಷ ಅಶ್ವಿತ್ ಕುಲಾಲ್ ,ಪೋಷಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶುಭ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಉಪಮುಖ್ಯ ಶಿಕ್ಷಕಿ , ಶ್ರೀಮತಿ ಸೌಮ್ಯ ನಿರೂಪಿಸಿ ,ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಪವಿತ್ರ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ವಂದಿಸಿದರು.

Related posts

ಗುರುವಾಯನಕೆರೆ: ವರದ ಪಾಂಡುರಂಗ ವಿಠಲ ಮಂದಿರದ ಕಾಣಿಕೆ ಡಬ್ಬಿ ಹಣ ಕಳವು

Suddi Udaya

ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಪ್ರಗತಿಪರ ಕೃಷಿಕ ಕಿರಣ್ ಕುಮಾರ್ ಮಂಜಿಲ ಆಯ್ಕೆ

Suddi Udaya

ಮಂಗಳೂರು-ಉಡುಪಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಕುಮಾರಚಂದ್ರ ಬೆಳ್ತಂಗಡಿ ನಿಯೋಜನೆ

Suddi Udaya

ಉಜಿರೆ: ಅನುಗ್ರಹ ಆಂ.ಮಾ. ಪ್ರೌಢಶಾಲೆಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ದುಷ್ಪರಿಣಾಮಗಳ ಮಾಹಿತಿ ಕಾರ್ಯಾಗಾರ

Suddi Udaya

ಇಂದಬೆಟ್ಟು: ಬರೆಮೇಲು ನಿವಾಸಿ ಯಶೋಧ ಯಾನೆ ಮೋನಮ್ಮ ನಿಧನ

Suddi Udaya

ಉಜಿರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಎಮ್. ಗೋಪಾಲಕೃಷ್ಣ ಶೆಟ್ಟಿ (ಎಂ.ಜಿ ಶೆಟ್ಟಿ ) ನಿಧನ

Suddi Udaya
error: Content is protected !!