ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇವರು ನಡೆಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಸರ್ವಾರ್ಥ್ ಎಸ್. ಜೈನ್ ವೇಣೂರು ಇವರು 93.25% ಪಡೆದು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾನೆ.
ಭಾರತಿ ಶಿಶು ಮಂದಿರ ಮತ್ತು ಸೇವಾ ಶರಧಿ ವಿಶ್ವಸ್ಥ ಮಂಡಳಿ ವೇಣೂರು ಇವರು ನಡೆಸುತ್ತಿರುವ ಕಲಾ ಸೌರಭ ಸಂಗೀತ ತರಗತಿಯ ವಿದ್ವಾನ್ ಜಿ. ಜೆ ಜಗದೀಶ್ ಹಾಗೂ ವಿಧುಷಿ ಲಾವಣ್ಯ ಜಗದೀಶ್ ಮೂಡುಬಿದ್ರೆ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ. ವೇಣೂರು ಪಾಶ್ವನಾಥ ಪಿಂಟರ್‍ಸ್ ನ ಸುಧತ್ ಜೈನ್ ಹಾಗೂ ಶ್ರೀಮತಿ ಸುಷ್ಮಾ ದಂಪತಿಯ ಪುತ್ರ.