April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕುತ್ಲೂರಿನ ಸುಂದರಿ ಸೇರಿ ಶರಣಾದ 6 ಮಂದಿ ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಿ ಎನ್‌ಐಎ ಕೋರ್ಟ್ ಆದೇಶ

ಬೆಂಗಳೂರು: ನಿನ್ನೆ ಶರಣಾದ 6 ಮಂದಿ ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಿ ಎನ್‌ಐಎ ವಿಶೇಷ ಕೋರ್ಟ್ ಆದೇಶ ನೀಡಿದೆ. ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಶರಣಾಗಿದ್ದ ನಕ್ಸಲರನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಜ.9ರಂದು ಅವರನ್ನು ಎನ್‌ಐಎ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್‌ಗೆ ಹಾಜರುಪಡಿಸುವ ಮುನ್ನ 6 ನಕ್ಸಲರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿತ್ತು. ನಂತರ 6 ನಕ್ಸಲರನ್ನು ಬಿಗಿ ಪೊಲೀಸ್‌ ಬಂಧೋಬಸ್ತ್ ನಲ್ಲಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್‌ಐಎ ವಿಶೇಷ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು.

ರಾಜ್ಯದ ನಕ್ಸಲ್ ನಾಯಕರಾದ ಮುಂಡಗಾರು ಲತಾ, ಸುಂದರಿ ಕೂತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್ ಟಿ.ಎನ್, ಮಾರೆಪ್ಪ ಅರೋಲಿ ಅವರನ್ನು ಇಂದು ಚಿಕ್ಕಮಗಳೂರು ಡಿವೈಎಸ್‌ಪಿ ಬಾಲಾಜಿ ಸಿಂಗ್ ಎನ್‌ಐಎ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಗಂಗಾಧರ್ ಮುಂದೆ ಹಾಜರುಪಡಿಸಿದ್ದರು. ಆರು ಮಂದಿ ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ. ಜನವರಿ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಕೆಲವೇ ಕ್ಷಣಗಳಲ್ಲಿ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುವುದು.

Related posts

ಅವಾಚ್ಯವಾಗಿ ಬೈದು ಹಲ್ಲೆ ,ದೈಹಿಕ ಹಿಂಸೆ ಆರೋಪ: ಪತಿಯ ವಿರುದ್ಧ ಪತ್ನಿ ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಮದ್ದಡ್ಕ ಪೇಟೆಯಲ್ಲಿ 2 ತಿಂಗಳಿಂದ ಉರಿಯುತ್ತಿಲ್ಲ ದಾರಿ ದೀಪ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್‌ ಸಲೂನ್‌ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭ

Suddi Udaya

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಭೋಜರಾಜ ಶೆಟ್ಟಿ ಪಿಲ್ಯ ನಿಧನ

Suddi Udaya

ಬೆದ್ರಬೆಟ್ಟು ಅರಿಫಾಯ್ಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್‌ ಅಝಾ ಆಚರಣೆ

Suddi Udaya

ಗುರುವಾಯನಕೆರೆ: ಪಣೆಜಾಲಿನ ನಿವಾಸಿ ಪ್ರವೀಣ್ ಪ್ರಭು ನಿಧನ

Suddi Udaya
error: Content is protected !!