ಬಂದಾರು : ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಸಭಾಭವವನದಲ್ಲಿ ಪೆರ್ಲ ಬೈಪಾಡಿ ಊರುದ ಭಕ್ತಿದ ಎಸಲ್ ಎಂಬ ತುಳು ಆಡಿಯೋ & ವಿಡಿಯೋ ಆಲ್ಬಮ್ ಬಿಡುಗಡೆ ಜ 08 ರಂದು ಸಿದ್ದಿವಿನಾಯಕ ಸಭಾವನದನದಲ್ಲಿ ನಡೆಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಉಪನ್ಯಾಸಕ ದಿವಾ ಕೊಕ್ಕಡ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ
ಬ್ರಹ್ಮಕಲಶೋತ್ಸವ ಪ್ರಧಾನ ಸಂಚಾಲಕರಾದ ಬಾಲಕೃಷ್ಣ ಪೂಜಾರಿ ಬಜಗುತ್ತು, ಅಧ್ಯಕ್ಷರಾದ ಮಹಾಬಲ ಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾದೆ, ಭಜನಾ ಮಂಡಳಿ ಅಧ್ಯಕ್ಷರಾದ ಲಕ್ಷ್ಮಣ ಗೌಡ ಫಲಸದ ಕೋಡಿ, ಬೈಪಾಡಿ, ವಾಸಪ್ಪ ಗೌಡ ಅನಿಲ, ವಿಶ್ವನಾಥ ಬೈಪಾಡಿ, ಶ್ರೀನಿವಾಸ್ ಗೌಡ ಬಾಲಂಪಾಡಿ, ಗಿರೀಶ್ ಗೌಡ ಬಿ. ಕೆ ಬಂದಾರು, ಪ್ರವೀಣ್ ಬಿ.ಎಸ್, ಲೋಕ್ಷತ್ ಗೌಡ ಅನಿಲ ಉಪಸ್ಥಿತರಿದ್ದರು.
ಪೆರ್ಲ -ಬೈಪಾಡಿ ಊರುದ ಭಕ್ತಿದ ಎಸಲ್ ತುಳು ಆಡಿಯೋ & ವಿಡಿಯೋ ಆಲ್ಬಮ್ ನಲ್ಲಿ ಸಾಹಿತ್ಯ ವಾಸಪ್ಪ ಗೌಡ ಅನಿಲ , ಗಾಯನ ವಿಶ್ವನಾಥ ಗೌಡ ಬೈಪಾಡಿ, ಸಹಗಾಯನ ಸೌಮ್ಯ ಜೈನ್ ಆಳದಂಗಡಿ, ವಿಶೇಷ ಸಹಕಾರ ರಕ್ಷಿತ್ ಪಣೆಕ್ಕರ, ಗಿರೀಶ್ ಗೌಡ ಬಿ.ಕೆ.ಬಂದಾರು, ಲೋಕ್ಷತ್ ಗೌಡ ಅನಿಲ, ಪ್ರವೀಣ್ ಬಿ.ಎಸ್.ಬಾಲoಪಾಡಿ,ನುಡಿ ಧ್ವನಿ ಶ್ರೀನಿವಾಸ್ ಗೌಡ ಬಾಲoಪಾಡಿ, ವಿಡಿಯೋಗ್ರಫಿ ರಾಕೇಶ್ ಕುಮಾರ್.ಎಸ್, ಎಡಿಟಿಂಗ್ ಸಹನ್ ಎಂ.ಎಸ್. ಉಜಿರೆ, ರೆಕಾರ್ಡಿಂಗ್ ಸೌಂಡ್ ಮಾಸ್ಟರ್ ಉಜಿರೆ, ವಿಶೇಷ ಸಹಕಾರ ಯೂ ಪ್ಲಸ್ ಚಾನೆಲ್ ಉಜಿರೆ, ಹಿಪ್ ಬಾಯ್ಸ್ ಡ್ಯಾನ್ಸ್ ಕ್ರೂ ಯೌಟ್ಯೂಬ್ ಚಾನೆಲ್ ನಲ್ಲಿ ಮೂಡಿಬಂದಿದೆ.
ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಆಡಳಿತ ಮೊಕ್ತೇಸರರು, ಅರ್ಚಕರು ವೃಂದ,ಆಡಳಿತಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಭಜನಾ ಮಂಡಳಿ, ಮಹಿಳಾ ಸಮಿತಿ, ಸರ್ವ -ಸದಸ್ಯರು, ಭಕ್ತ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದರು, ಅಧ್ಯಾಪಕರಾದ ವಿಜಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.