ಮಚ್ಚಿನ ಶುದ್ಧ ಕುಡಿಯುವ ನೀರಿನ ಘಟಕ ಮಚ್ಚಿನ ಪೇಟೆಗೊಂದು ಅಲಂಕಾರದ ವಸ್ತುವಂತೆ ಕಂಗೊಳಿಸುತ್ತಿದೆ. ಈ ಘಟಕ ನಿರ್ಮಾಣವಾಗಿ ವರ್ಷಗಳು ಕಳೆದರೂ ಇನ್ನೂ ಜನರಿಗೆ ಉಪಯೋಗಕಿಲ್ಲದಂತಾಗಿದೆ. ಮಚ್ಚಿನ ಗ್ರಾಮದ ಜನರಿಗೆ ಶುದ್ಧ ನೀರು ಬೇಕಾದಲ್ಲಿ ಸ್ಥಳೀಯ ಪಂಚಾಯತಿಗೆ ತೆರಳಿ ನೀರು ತರುವಂತ ಪರಿಸ್ಥಿತಿ ಈ ಭಾಗದ ಜನರದಾಗಿದೆ.
ಅದೆಷ್ಟೋ ಬೆಲೆ ಬಾಳುವ ಮಿಷನರಿಗಳು ತುಕ್ಕು ಹಿಡಿದು ಹೋಗುತ್ತಿದೆ ಸರ್ಕಾರದಿಂದ ದೊರೆತರೂ ಜನರ ಕೈಗೆ ಮಾತ್ರ ಶೂನ್ಯ . ಈ ಶುದ್ಧ ನೀರಿನ ಘಟಕ ಇನ್ನಾದರೂ ಜನಸಾಮಾನ್ಯರ ಪ್ರಯೋಜನಕ್ಕೆ ನೀಡುವಂತಾಗಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.